ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಕೈಲಾಸ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಕಾಸರಗೋಡು ಇದರ ಆಶ್ರಯದಲ್ಲಿ ಆ. 8ರಂದು ನಡಯಲಿರುವ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪ್ರಯುಕ್ತ ಪೂಜೆಗೊಳ್ಳಲ್ಪಡುವ ಶ್ರೀ ಲಕ್ಷ್ಮೀ ದೇವಿಯ ನೂತನ ಛಾಯಾಚಿತ್ರವನ್ನು ಸಮಿತಿ ಪದಾಧಿಕಾರಿಗಳಿಗೆ ಸಮರ್ಪಿಸಲಾಯಿತು.
ಮಂಗಳೂರಿನ ಮಹಾಲಸಾ ಕಾಲೇಜಿನ ವಿದ್ಯಾರ್ಥಿ ಸಂದೇಶ್ ಆಚಾರ್ಯ ಅವರು ಛಾಯಾಚಿತ್ರ ರಚಿಸಿ ಸಮರ್ಪಿಸಿದ್ದಾರೆ.
ಸಮಿತಿ ಅಧ್ಯಕ್ಷೆ ಶಾರದಾ ಎಸ್.ರಾವ್, ಸಂಘದ ಹಿರಿಯ ಮಾರ್ಗದರ್ಶಿ, ಕಾಸರಗೋಡು ನಗರಸಭೆ ಸದಸ್ಯೆ ಸವಿತಾ ಟೀಚರ್, ಕಾರ್ಯದರ್ಶಿ ಸೌಮ್ಯ ಎಸ್.ಎನ್.ಹೊಳ್ಳ ಹಾಗೂ ಹಿರಿಯ ಸದಸ್ಯೆ ಇಂದಿರಾ ಅವರು ಛಾಯಾಚಿತ್ರ ಸ್ವೀಕರಿಸಿದರು.
ಈ ಸಂದರ್ಭ ಸಮಿತಿಯ ಉಪಾಧ್ಯಕ್ಷೆ ಸೂರ್ಯಕಾಂತಿ, ಕೋಶಾಧಿಕಾರಿ ಲೀಲಾ ಸುಜಯ್, ಜತೆಕಾರ್ಯದರ್ಶಿ ವಿಜಯಾ ಶೆಟ್ಟಿ, ಸದಸ್ಯೆಯರಾದ ಸವಿತಾ ಕಿಶೋರ್, ಶ್ರೀದೇವಿ ಎಸ್.ರಾವ್, ಪ್ರೇಮಲತಾ ಪುರಂದರ ಶೆಟ್ಟಿ, ವೀಣಾ ರಂಗನಾಥ್, ಶಾರದ ಶರವಣ, ಶ್ವೇತಾ ಗೋಕುಲ್, ಅರುಣಾ ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು.


