ಕುಂಬಳೆ: ಶುಚಿ-ರುಚಿಯಾದ ಆಹಾರ ಆರೋಗ್ಯಕ್ಕೆ ಪೂರಕ. ಆಹಾರದಲ್ಲಿ ಔಷಧೀಯ ಗುಣವಿದ್ದರೆ ರೋಗರುಜಿನಗಳಿಂದ ದೂರವಿರಬಹುದು. ಆದರೆ ಇಂದಿನ ಕಲುಷಿತ ವಾತಾವರಣದಲ್ಲಿ ವಿಷಯುಕ್ತ ಆಹಾರ ಪದಾರ್ಥಗಳೇ ಹೆಚ್ಚಾಗಿದೆ. ಇಂತಹ ವಾತಾವರಣದಲ್ಲಿ ಆಡಂಬರದ ಹೆಸರಿನಲ್ಲಿ ಆನ್‍ಲೈನ್ ಆಹಾರದ ದಾಸರಾಗುತ್ತಿದ್ದೇವೆ. ಇಂತಹ ಸನ್ನಿವೇಷದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಮಾಜದ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಆಯೋಜಿಸಿದ `ಕೋಟೆ ಸವಿರುಚಿ' ಕಾರ್ಯಕ್ರಮ ಶ್ಲಾಘನೀಯ ಎಂದು ಮಂಗಳೂರು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಂಶುಪಾಲ ಮತ್ತು ಆರೋಗ್ಯಾಧಿಕಾರಿ ಡಾ.ಸಂದೀಪ್ ಬೇಕಲ್ ಹೇಳಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘವು ಜಿಲ್ಲಾ ಮಹಿಳಾ ಸಂಘದ ಸಹಯೋಗದೊಂದಿಗೆ ಬೀರಂತಬೈಲಿನ ಲಲಿತಕಲಾ ಸದನದಲ್ಲಿ ಆಯೋಜಿಸಿದ `ಶ್ರಾವಣ ಸಂಭ್ರಮ-ಕೋಟೆ ಸವಿರುಚಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಹಿರಿಯ ಸದಸ್ಯ ಕೋದಂಡರಾಜ್ ಬೇಕಲ್ ದಂಪತಿಗಳು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಮತ್ತ ಮುದಿಯಕ್ಕಾಲ್ ಶ್ರೀ ಕಾಲಬೈರವ ದೇವಸ್ಥಾನದ ಅಧ್ಯಕ್ಷ ರಾಜೇಶ್ ಬೇಕಲ್, ಮಂಗಳೂರಿನ ನಿವೃತ್ತ ಅಧ್ಯಾಪಕಿ ಉಮಾಗೌರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ನಿರಂಜನ ಕೊರಕ್ಕೋಡು, ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು, ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಅಧ್ಯಕ್ಷೆ ಉಷಾ ಟೀಚರ್ ಪಾರೆಕಡವು ಉಪಸ್ಥಿತರಿದ್ದರು.
ಕಾರ್ಯಕ್ರಮದಂಗವಾಗಿ ರಸ ಪ್ರಶ್ನೆ ಸ್ಪರ್ಧೆ ಗಿಡ ಮೂಲಿಕೆಗಳ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕೋಟೆಯವರ ಸಾಂಪ್ರದಾಯಿಕ ಆಹಾರದ ಪ್ರದರ್ಶನ ಏರ್ಪಡಿಸಿ ಅದನ್ನೇ ಉಣಬಡಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಣಂಗೂರು ಸ್ವಾಗತಿಸಿ, ಉಪಾಧ್ಯಕ್ಷ ಜಗದೀಶ್ ಕೂಡ್ಲು, ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಉಪಾಕಿರಣ್ ಅಣಂಗೂರು ವಂದಿಸಿದರು.




.jpg)
