ಕಾಸರಗೋಡು: ಪೆÇವ್ವಲ್ ಲಾಲ್‍ಬಹದ್ದೂರ್ ಶಾಸ್ತ್ರ(ಎಲ್‍ಬಿಎಸ್)ಎಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಘಟಕ ಮತ್ತು ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಸ್ನೇಹ ದಿನಾಚರಣೆಯಂದು "ಸ್ನೇಹಿತನಿಗಾಗಿ ಒಂದು ಮರ" ಎಂಬ ಧ್ಯೇಯದೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜು ಪ್ರಾಂಶುಪಾಲ ಡಾ.ಟಿ.ಮಹಮ್ಮದ್ ಶುಕೂರ್ ಬಯೋ ಪಾರ್ಕ್ ನಲ್ಲಿ ಮೊದಲ ಸಸಿ ನೆಡುವ ಮೂಲಕ ಕಾರ್ಯಖ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಸಿರು ಕೇರಳ ಮಿಷನ್ ಸಂಪನ್ಮೂಲ ವ್ಯಕ್ತಿ ಲೋಹಿತಾಕ್ಷನ್ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಅರುಣ್ ಎಸ್.ಮ್ಯಾಥ್ಯೂ ಬಯೋಡೈವರ್ಸಿಟಿ ಪಾರ್ಕ್ ಫ್ಯಾಕಲ್ಟಿ ಪ್ರಭಾರಿ ಪೆÇ್ರ.ಓ.ಎಂ.ವಿನೋದ್, ಎನ್‍ಆರ್‍ಪಿಎಫ್ ಟ್ರೀ ಟ್ಯಾಗಿಂಗ್ ಪ್ರಾದೇಶಿಕ ಸಂಯೋಜಕ ಎನ್‍ಆರ್‍ಪಿಎಫ್ ವಿ ಮಂಜು ಮ್ಯಾಥ್ಯೂ ಬಯೋಡೈವರ್ಸಿಟಿ ಪಾರ್ಕ್ ಫ್ಯಾಕಲ್ಟಿ ಪ್ರಭಾರಿ ಪೆÇ್ರ.ಓ.ಎಂ.ವಿನೋದ್, ಎನ್‍ಆರ್‍ಪಿಎಫ್ ಟ್ರೀ ಟ್ಯಾಗಿಂಗ್ ಪ್ರಾದೇಶಿಕ ಸಂಯೋಜಕ ವಿ ಮಂಜು, ಎನ್‍ಆರ್‍ಪಿಎಫ್ ಸಂಯೋಜಕರಾದ ಪ್ರಜ್ವಲ್ ಕೃಷ್ಣ, ಗೋಕುಲ್, ಜಿತು, ಸಹಾಯಕ ಸ್ವಯಂಸೇವಕ ಕಾರ್ಯದರ್ಶಿ ನವೀನ್ ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾದ ಸಸಿಗಳನ್ನು ಕಾಲೇಜು ವಠಾರದಲ್ಲಿ ನೆಡಲಾಯಿತು.
ಪರಿಸರ ಸಂರಕ್ಷಣೆ ಮತ್ತು ಸ್ನೇಹದ ಸಂಕೇತವಾಗಿ, ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಹೆಸರುಗಳನ್ನು ಟ್ಯಾಗ್ ಅಳವಡಿಸಿ ವಿವಿಧ ವಿಭಾಗಗಳ ಬಳಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಸ್ಪರ ಸ್ನೇಹ ಮತ್ತು ಪರಿಸರ ಜಾಗೃತಿಯನ್ನು ಹಂಚಿಕೊಂಡರು. ಎನ್‍ಆರ್‍ಪಿಎಫ್ ವಿಭಾಗ ಮತ್ತು ಎನ್‍ಆರ್‍ಪಿಎಫ್ ತಂಡವು ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.





