ಕಾಸರಗೋಡು: ಪ್ರಾದೇಶಿಕ ಹಣ್ಣು ಮತ್ತು ತರಕಾರಿ ಉತ್ಪಾದಕರ ಸಹಕಾರಿ ಮಾರ್ಕೆಟಿಂಗ್ ಸೊಸೈಟಿ (ವೆಜ್‍ಕೋ)ಯ ನವೀಕರಿಸಿದ ಮಾರಾಟಕೇಂದ್ರದ ಉದ್ಘಾಟನೆ ಕಾಸರಗೋಡು ನಗರಸಭಾ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಜರುಗಿತು.
ಕಾಸರಗೋಡು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಕೆ. ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಎಂ. ಲಲಿತಾ, ಪವಿತ್ರಾ ಸಂತೋಷ್, ಸರ್ಕಲ್ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ. ಆರ್. ಜಯಾನಂದ, ಸಂಘದ ಉಪಾಧ್ಯಕ್ಷ ಕೆ. ಸಿ. ಸುಮಿತ್ರನ್ ಉಪಸ್ಥಿತರಿದ್ದರು. ನಿರ್ದೇಶಕ ಸಿ. ಬಾಲಕೃಷ್ಣನ್ ಸ್ವಾಗತಿಸಿದರು. ಕಾರ್ಯದರ್ಶಿ ಟಿ.ಕೆ. ಸಜೇಶ್ ವಂದಿಸಿದರು. 'ವೆಜ್‍ಕೋ' 1977 ರಿಂದ ಹಣ್ಣು ಮತ್ತು ತರಕಾರಿ ಸಂಗ್ರಹಣೆ ಮತ್ತು ವಿತರಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಯಾಗಿದ್ದು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೈತರಿಂದ ನ್ಯಾಯೋಚಿತ ಬೆಲೆಗೆ ಸಂಗ್ರಹಿಸಿದ ಉತ್ಪನ್ನಗಳನ್ನು ಕನಿಷ್ಠ ಲಾಭಾಂಶದೊಂದಿಗೆ ಮಾರಾಟ ಮಡಲಾಗುತ್ತಿದೆ. ಜಿಲ್ಲೆಯಲ್ಲಿ 20 ಡಿಪೆÇೀಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಂದ ಖರೀದಿಸಿದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ವಿತರಿಸಲಾಗುತ್ತದೆ. ಮದುವೆಯ ವಿಶೇಷ ಕಾರ್ಯಕ್ರಮಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ವಸ್ತುಗಳು ವೆಜ್‍ಕಂ ಮೂಲಕ ಸಗಟು ಬೆಲೆಯಲ್ಲಿ ಲಭ್ಯವಿರಲಿದೆ. 2924-25ನೇ ಸಾಲಿನಲ್ಲಿ ಈ ತಂಡವು ಅತ್ಯುತ್ತಮ ಮಾರ್ಕೆಟಿಂಗ್ ತಂಡಕ್ಕಾಗಿ ಪ್ರಶಸ್ತಿ ಗಳಿಸಿತ್ತು.





