ಕಾಸರಗೋಡು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆ ನೌಕರರ ಜಂಟಿ ಮುಷ್ಕರ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಾಯಿತು.
ಖಾಸಗಿ ಆಸ್ಪತ್ರೆ ನೌಕರರಿಗೆ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಪ್ರಕಟಿಸಬೇಕು, ಖಾಸಗಿ ಆಸ್ಪತ್ರೆನೌಕರರ ಕಾನೂನು ಪ್ರಕಟಿಸಬೇಕು, ಕಾಯಂ ಉದ್ಯೋಗ ವಲಯದಲ್ಲಿ ಒಪ್ಪಂದದ ಉದ್ಯೋಗವನ್ನು ಕೊನೆಗೊಳಿಸಬೇಕು, ಇಎಸ್‍ಐ ಮಿತಿಯಿಲ್ಲದವರಿಗೆ ವಿಮಾ ರಕ್ಷಣೆ ಒದಗಿಸಬೇಕು, 3-ಶಿಫ್ಟ್ ಕೆಲಸವನ್ನು ಸರಿಯಾಗಿ ಕಾರ್ಯಗತಗೊಳಿಸುವುದು ಮತ್ತು ಶಾಸನಬದ್ಧ ಭತ್ಯೆಗಳನ್ನು ಒದಗಿಸುವುದು, ಪೂರ್ಣ ವೇತನ ನೀಡುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ಆಯೋಜಿಸಲಾಘಿತ್ತು. ಸಂಘಟನೆ ರಾಜ್ಯ ಸಂಚಾಲಕ ಎ. ಮಾಧವನ್ ಉದ್ಘಾಟಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಸಿ.ಶೋಭಲತಾ, ಬಿಜು ಉನ್ನಿತ್ತಾನ್, ಪಿ.ವಿ.ಕುಞಂಬು ಮತ್ತು ಎಸ್.ವಿವೇಕಾನಂದನ್ ಉಪಸ್ಥಿತರಿದ್ದರು. ಜಂಟಿ ಮುಷ್ಕರ ಸಮಿತಿ ಜಿಲ್ಲಾ ಸಂಚಾಲಕ ಕೆ.ರವೀಂದ್ರನ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಕೆ.ಕಮಲಾಕ್ಷನ್ ವಂದಿಸಿದರು.




