ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಿಂದ ನಿವೃತ್ತಿ ಹೊಂದುತ್ತಿರುವ ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್ ಅವರನ್ನು ವಿಶ್ವ ವಿದ್ಯಾಲಯದ ನೀಲಗಿರಿ ಅತಿಥಿಗೃಹ ಸಭಾಂಗಣದಲ್ಲಿ ಬೀಳ್ಕೊಡಲಾಯಿತು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಶಾಲುಹೊದಿಸಿ, ಸ್ಮರಣಿಕೆ ನೀಡಿ ಮುರಳೀಧರನ್ ನಂಬ್ಯಾರ್ ಅವರನ್ನು ಗೌರವಿಸಿದರು. ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಡೀನ್ ಅಕಾಡೆಮಿಕ್ ಪೆÇ್ರ. ಅಮೃತ್ ಜಿ. ಕುಮಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ರಾಜೇಂದ್ರ ಪಿಲಾಂಗಟ್ಟೆ, ಭೌತಶಾಸ್ತ್ರ ವಿಭಾಗಪ್ರಾಧ್ಯಾಪಕ ಡಾ.ವಿನ್ಸೆಂಟ್ ಮ್ಯಾಥ್ಯೂ ಮತ್ತು ಹಿಂದಿ ಅಧಿಕಾರಿ ಡಾ.ಟಿ.ಕೆ.ಅನೀಶ್ ಕುಮಾರ್ ಉಪಸ್ಥಿತರಿದ್ದರು.





