ಕಾಸರಗೋಡು: ನಗರದ ಕೇಳುಗುಡ್ಡೆ, ಗುಡ್ಡೆ ದೇವಸ್ಥಾನ, ಗಂಗೆ ಕೂಡ್ಲು ಪ್ರದೇಶಗಳ ಕ್ರೀಡಾ ಪ್ರೇಮಿಗಳಿಗಾಗಿ ಕಳೆದ ಎಂಟು ವರ್ಷಗಳಿಂದ ನಡೆದು ಬರುತ್ತಿರುವ ಕೂಡ್ಲು ಗಂಗೆ ಕೆಸರು ಗದ್ಧೆಯಲ್ಲಿ'ಗ್ರಾಮೋತ್ಸವ' ಗ್ರಾಮೀಣ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂಧಿರದ ಅರ್ಚಕ ಸತ್ಯನಾರಾಯಣ ಅಡಿಗ ಉದ್ಘಾಟಿಸಿದರು. ಕಾಸರಗೋಡು ನಗರ ಸಭೆಯ ಪ್ರತಿಪಕ್ಷ ನೇತಾರ ಪಿ .ರಮೇಶ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ಗುರು ಸ್ವಾಮಿ, ವಸಂತ ಗುರುಸ್ವಾನಿ, ರವಿಚಂದ್ರ ಗುರುಸ್ವಾಮಿ,ಅಮ್ಮು ರೈ ಚಟ್ಲ, ,ತಾರಾನಾಥ ಪೂಜಾರಿ ಗಂಗೆ, ಮಹಾಬಲ ನಾಯ್ಕ್, ವಕೀಲ ಪಿ.ಮುರಳೀಧರನ್, ಕೆ.ಟಿ.ಜಯಲಕ್ಷ್ಮಿ, ಆಧೀರ ಸಿ.ಎಚ್, ಎಮ್.ಕೆ.ಅಂಜಲಿ, ಗಣೇಶ್ ಪಾಟಾಳಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭಧಲ್ಲಿ ಈ ವರ್ಷದ ಎಸ್ಸೆಸೆಲ್ಸಿ, ಪ್ಲಸ್ ಟು, ಸಿ ಬಿ ಎಸ್ ಪರೀಕ್ಷಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಶಾಲಾಯಿತು. ಗ್ರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಕೆಸರುಗದ್ದೆಯಲ್ಲಿ ವಾಲಿಬಾಲ್, ಓಟದ ಪಂದ್ಯ, ಮಹಿಳೆಯರು ಹಾಗೂ ಪುರುಷರಿಗಾಗಿ ಹಗ್ಗ ಜಗ್ಗಾಟ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಿತು.

