ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾಸಂಘದ ಜಿಲ್ಲಾ ಸಮಾವೇಶ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಮುಳ್ಳೇರಿಯ ಕಾಡಗಂ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಗುಣಪಾಲ ಅಮೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಕುಂಞ್ಞಪ್ಪು ಮಂಞಂಪಾರೆ, ಜಿಲ್ಲಾ ಪದಾಧಿಕಾರಿಗಳಾದ ಶೀನಾ ಮಂಞಂಪಾರೆ, ಮುತ್ತಪ್ಪ ದೇವರಡ್ಕ, ಸೌಧಾಮಿನಿ ಕಾಞಂಗಾಡ್, ಗುಲಾಬಿ ಕುಂಬಳೆ, ಬಾಬು ಎಡಪರಂಬು, ಸುಂದರ ನೆಟ್ಟಣಿಗೆ, ರಾಜರಾಮ್ ಪುತ್ರಕಳ, ಸಂತೋಷ್ ಆದೂರ್, ರಾಧಕೃಷ್ಣ ಮಂಞಂಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ಸಮುದಾಯದ ಏಳಿಗೆ, ಬೆಳವಣಿ, ರಕ್ಷಣೆಗಳಿಗೆ ಸಂಘಟನಾತ್ಮಕವಾಗಿ ಕಾರ್ಯಪ್ರವೃತಿಗೆ ಬರುತ್ತೇವೆ ಎಂದು ಜಿಲ್ಲಾ ಸಮಿತಿ ಸಂಕಲ್ಪ ಮಾಡಿಕೊಂಡಿತು. ಸಮುದಾಯದ ವಿರುದ್ಧ ನಡೆಯುವ ಅನ್ಯಾಯಗಳಿಗೆ ಕಾನೂನಾತ್ಮಕ ಹೋರಾಟಗಾಳಿಗೂ ಜಿಲ್ಲಾ ಸಮಿತಿ ಶತಸಿದ್ಧ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಸರಗೋಡು ಸ್ವಾಗತಿಸಿ, ಜಿಲ್ಲಾ ಕಾರ್ಯಕಾರಿ ಸದಸ್ಯ ರಾಜೇಶ್ ಅಮೈ ವಂದಿಸಿದರು.

