ಬದಿಯಡ್ಕ,: ನಾಗಾಲೋಟ ಮುಂದುವರಿಯುತ್ತಿರುವ ಪ್ರಪಂಚದಲ್ಲಿ ವಿಶ್ವ ಶಾಂತಿಯ ಅಗತ್ಯವಿದೆ. ಯುದ್ಧದಿಂದ ಯಾವುದೇ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ ಎಂದು ಬೇಳ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕಿ ಸಿ.ಪ್ರತಿಭಾ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಹಿರೋಷಿಮಾ ನಾಗಸಾಕಿ ದಿನದ ಪ್ರಯುಕ್ತ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಜರಗಿದುವು. ನಂತರ ಶಾಂತಿ ಸಂದೇಶ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಶಾಂತಿ ಡಿ'ಸೋಜಾ ಮತ್ತು ಶಿಕ್ಷಕಿ ರೇಶ್ಮಾ ನೇತೃತ್ವ ನೀಡಿದರು.




.jpg)
