HEALTH TIPS

ಕಾಸರಗೋಡಿನ ಕನ್ನಡ ಹೋರಾಟಕ್ಕೆ ಯು.ಪಿ ಕುಣಿಕುಳ್ಳಾಯ ಅವರು ಪ್ರೇರಣಾ ಶಕ್ತಿ-ಸಂಸ್ಮರಣಾ ಸಮಾರಂಭದಲ್ಲಿ ಕೆ. ಮುರಳೀಧರ ಬಳ್ಳಕ್ಕುರಾಯ ಅಭಿಪ್ರಾಯ

ಕಾಸರಗೋಡು: ಮಾಜಿ ಶಾಸಕ, ಕನ್ನಡ ಹೋರಾಟಗಾರ, ವಕೀಲ ದಿ.ಯು.ಪಿ ಕುಣಿಕುಳ್ಳಾಯ ಅವರ ಸಂಸ್ಮರಣಾ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ  ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.

ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಕೆ. ಮುರಳೀಧರ ಬಳ್ಳಕ್ಕುರಾಯ ಸಂಸ್ಕರಣಾ ಭಾಷಣ ಮಾಡಿ, ಕಾಸರಗೋಡಿನಲ್ಲಿ ಕನ್ನಡದ ಸವಲತ್ತುಗಳನ್ನು ಉಳಿಸುವುದಕ್ಕಾಗಿ ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯ ಅವರು ಅವಿರತವಾಗಿ ಶ್ರಮಿಸಿದವರು. ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅನ್ಯಾಯವಾದಾಗ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವ ಮೂಲಕ ನ್ಯಾಯ ದೊರಕಿಸಿಕೊಟ್ಟಿರುವ ಉಬ್ರಂಗಳ ಪದ್ಮನಾಭ ಕುಣಿಕುಳ್ಳಾಯ(ಯು.ಪಿ ಕುಣಿಕುಳ್ಳಾಯ)ಅವರು ಪ್ರಾತಃಸ್ಮರಣೀಯರು. ಕುಣಿಕುಳ್ಳಾಯ ಅವರ ವ್ಯಕ್ತಿತ್ವ, ಬದುಕು, ಆದರ್ಶ ಕನ್ನಡಿಗರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆ ತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ಮಾಜಿ ಗೌರವ ಕಾರ್ಯದರ್ಶಿ ಬಿ. ರಾಮಮೂರ್ತಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ.ಎ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪೆÇ್ರ. ಪಿ. ಎನ್ ಮೂಡಿತ್ತಾಯ, ಕನ್ನಡ ನೌಕರರಸಂಘದ ಮಾಜಿ ಅಧ್ಯಕ್ಷ ಡಿ. ಜಯನಾರಾಯಣ ತಾಯನ್ನೂರು, ಕುಣಿಕುಳ್ಳಾಯರ ವ್ಯಕ್ತಿತ್ವ ,ಸಾಧನೆ ,ಕನ್ನಡಪ್ರೇಮ ಮತ್ತು ಅವರ ಒಡನಾಟದ ಸವಿನೆನಪುಗಳ ಕುರಿತು ಮಾತನಾಡಿದರು. 

ಚಿತ್ರ ನಟ ಕಾಸರಗೋಡು ಚಿನ್ನಾ, ಹಿರಿಯ ಸಾಹಿತಿ ವೈ. ಸತ್ಯನಾರಾಯಣ, ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್, ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ. ಯಂ ಕಾಞಂಗಾಡು,ಪತ್ರಕರ್ತ ವೀಜಿ ಕಾಸರಗೋಡು, ಸುಕುಮಾರ ಆಲಂಪಾಡಿ, ಪಿ.ದಿವಾಕರ ಅಶೋಕನಗರ, ಬಿ.ಕೆ ಪ್ರಕಾಶ, ಸಂಜೀವ ಕೆ.ಬಿ, ಪುರುಷೋತ್ತಮ ಭಟ್ ಉಪಸ್ಥಿತರಿದ್ದರು.ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries