ಉಪ್ಪಳ: ಕೇರಳ ಸರ್ಕಾರದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ (ಕೆ.ಡಿ.ಪಿ) ಅಡಿಯಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರ ಶಿಫಾರಸಿನ ಮೇಲೆಗೆ ಅನುಮೋದಿಸಿದ ಒಂದೂವರೆ ಕೋಟಿಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಗುರುವಾರ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬಿನ ನೌಫಲ್ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಕೆ.ಡಿ.ಪಿಯ ಅಭಿಒಯಂತ ಸಲಾಹ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಯಮುನಾ ವರದಿ ವಾಚಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹಮಾನ್, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್. ಪಿ. ಕೆ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಸದಸ್ಯ ಅಬ್ದುಲ್ ರೆಹಮಾನ್ ಟಿ.ಎಂ, ಮಂಜೇಶ್ವರ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ. ಸಿ.ಎಚ್, ಮಂಜೇಶ್ವರ ಬಿ.ಆರ್.ಸಿ.ಯ ಬಿ. ಪಿ. ಸಿ ಸುಮಾದೇವಿ, ಪಿ.ಟಿ.ಎ, ಅಧ್ಯಕ್ಷ ಇಬ್ರಾಹಿಂ ಹನೀಫ್, ಗುತ್ತಿಗೆದಾರ ಆಶ್ರಫ್, ತಮಾಮ್ ಫರ್ನಿಚರ್ ಮಾಲಕ ಅಬೂಬಕರ್, ಪಿ.ಟಿ.ಎ. ಉಪಾಧ್ಯಕ್ಷೆ ಸೈಬುನಿಸ, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾ ದ ಇಸ್ಮಾಯಿಲ್, ಸುಜಾತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಪಿ.ಟಿ.ಎ. ಉಪಾಧ್ಯಕ್ಷ ಇಂತಿಯಾಸ್ ವಂದಿಸಿದರು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಕಾರ್ಯಕ್ರಮ ನಿರೂಪಿಸಿದರು.




.jpg)
