ಮಂಜೇಶ್ವರ: ಪಾವಳದ ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರರಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 33ನೇ ಮೊಸರು ಕುಡಿಕೆ ಮಹೋತ್ಸವ ಪ್ರೀತಿ ಮಹಿಳಾ ಸಮಾಜ ಪಾವಳ ಇವರ ಸಹಭಾಗಿತ್ವದಲ್ಲಿ ವಿವಿಧ ಆಟೊಟ ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು. ಭಾನುವಾರ ಬೆಳಿಗ್ಗೆ ಕಾಸರಗೋಡು ಜಿಲ್ಲಾ ಆಸ್ಪತ್ರೆ ಕುಂಬಳೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ವರ್ಕಾಡಿ ಇದರ ವೈದ್ಯರು ಹಾಗೂ ಸಿಬಂದಿಗಳಿಂದ ಸುಖ ಸಂಜೀವಿನಿ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಆರೋಗ್ಯ ವಿಮೆಯ ಮಾಹಿತಿಯನ್ನು ನಿವೃತ್ತ ಶಿಶು ಅಭಿವೃದ್ಧಿ ಅಧಿಕಾರಿ ಜ್ಯೋತಿ ಪಿ. ಮಂಜೇಶ್ವರ ನೀಡಿದರು.
ಸಂಜೆ ಪುಟಾಣಿ ಮಕ್ಕಳ ಶ್ರೀಕೃಷ್ಣ ವೇಷ ಪ್ರದರ್ಶನಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೈಬ್ರರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ತುಳುನಾಡ ಮಾಣಿಕ್ಯ ಚಿತ್ರನಟ ಅರವಿಂದ ಬೋಳಾರ್ ಉದ್ಘಾಟಿಸಿದರು. ತುಳು ಜಾನಪದ ಸಂಶೋಧನಾ ವಿದ್ಯಾರ್ಥಿ ವಿಜೇತ್ ಎಮ್. ಶೆಟ್ಟಿ ಮಂಜನಾಡಿ ತುಳುವೆರೆ ಅಟ್ಟೆಮಿ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಎಸ್ ಸುಳ್ಯಮೆ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಪಾಡಿ, ಜಿ.ಪಂ.ಸದಸ್ಯೆ ಕಮಲಾಕ್ಷಿ, ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಉದ್ಯಮಿ ವಿ.ಕೆ.ಉಮೇಶ್ ಕುಡುಪು, ಮಹಿಳಾ ಸಮಾಜದ ಅಧ್ಯಕ್ಷೆ ಪ್ರಭಾವತಿ ಚಂದ್ರಹಾಸ ಶೆಟ್ಟಿ ಪಾವಳ ಗುತ್ತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಕ್ಷರ ಸಂತ ಹರೆಕಳ ಹಾಜಬ್ಬ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂಪ್ರೀತಿ ಡ್ಯಾನ್ಸ್ ಟ್ರೂಪ್ ಪಾವಳ ಇವರ ನೃತ್ಯ ವೈಭವ ನಡೆಯಿತು. ಬಳಿಕ ಸಂತೋಷ್ ಕಲಾವಿದರು ಪಾವಳ ತಂಡದಿಂದ ರವೀಂದ್ರ ಕುಲಾಲ್ ವರ್ಕಾಡಿ ರಚನೆಯ ನಮಡನೆ ಉಪ್ಪಡ್ ನಾಟಕ ಪ್ರಥಮ ಪ್ರದರ್ಶನಗೊಂಡಿತು. ಕಿಶೋರ್ ಕುಮಾರ್ ಪಾವಳ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು.




.jpg)
