ಕುಂಬಳೆ: ಕೇರಳ ರಾಜ್ಯ ಹೊಲಿಗೆ ಕಾರ್ಮಿಕರ ಸಂಘಟನೆಯ ಸ್ಥಾಪಕ ನಾಯಕ ಮತ್ತು ಕೆ.ಎಸ್.ಟಿ.ಎ. ಮಾಜಿ ರಾಜ್ಯ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಅವರು ಶನಿವಾರ ನಿಧನರಾದರು. ಕೆ.ಎಸ್.ಟಿ.ಎ ಕಾಸರಗೋಡು ಜಿಲ್ಲಾ ಸಮಿತಿಯು ಗೋಪಾಲಕೃಷ್ಣ ಶೆಟ್ಟಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿ ಸಂತಾಪ ಸೂಚಿಸಿದೆ. ಕೆ.ಎಸ್.ಟಿ.ಎ ನಾಯಕ ಮತ್ತು ಮಧೂರು ಪಂಚಾಯತಿ ಮಾಜಿ ಅಧ್ಯಕ್ಷ ವಿಠಲ್ ಶೆಟ್ಟಿ, ಕೆ.ಎಸ್.ಟಿ.ಎ ಮಾಜಿ ರಾಜ್ಯ ಅಧ್ಯಕ್ಷ ರಾಮನ್ ಚೆನ್ನಿಕ್ಕರ, ರಾಜ್ಯ ಕಾರ್ಯದರ್ಶಿ ಮೋಹನದಾಸ್ ಕುಂಬಳೆ, ಜಿಲ್ಲಾ ಉಪಾಧ್ಯಕ್ಷ ಉದಯನ್ ಬಡಸಾಬ್, ತಾಲ್ಲೂಕು ಅಧ್ಯಕ್ಷ ತಾರಾನಾಥ್ ಶಿವಶಕ್ತಿ, ಮಾಜಿ ಜಿಲ್ಲಾ ಅಧ್ಯಕ್ಷ ಶಂಕರನ್ ಅಣಂಗೂರ್, ಘಟಕ ಅಧ್ಯಕ್ಷ ರಮೇಶ್ ಓಜಾರ್, ಮತ್ತು ಇತರ ಪ್ರಮುಖ ರಾಜ್ಯ , ಜಿಲ್ಲಾ, ತಾಲ್ಲೂಕು, ಹಾಗೂ ಘಟಕ ಮಟ್ಟದ ಪದಾಧಿಕಾರಿಗಳು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂಘಟನೆಯ ಪರವಾಗಿ ಅಂತಿಮ ಗೌರವ ಸಲ್ಲಿಸಿದರು.

-GOPALAKRISHNA%20SHETTY.jpg)
