ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 22ನೇ ಚಾತುರ್ಮಾಸ್ಯ ವ್ರತ ನಿಮಿತ್ತ ಆ. 24 ಭಾನುವಾರ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಸಹಿತ ಶ್ರೀ ವಿಷ್ಣು ಸಹಸ್ರನಾಮ ಹವನ ನಡೆಯಲಿದೆ. ಆ ದಿನ ಬೆಳಗ್ಗೆ 7 ಕ್ಕೆ ಗಣಪತಿ ಹೋಮ, 8:ಕ್ಕೆ ಶ್ರೀ ವಿಷ್ಣುಸಹಸ್ರನಾಮ ಹವನ, 10:ಕ್ಕೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, 10:45 ಪೂರ್ಣಾಹುತಿ ಮಹಾಪೂಜೆ, ಮಧ್ಯಾಹ್ನ 1:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಪೂರ್ವಾಹ್ನ 11.ಕ್ಕೆ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯ ಸಭಾ ಸದಸ್ಯ ಕೆ. ನಾರಾಯಣ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಮುಖ್ಯ ಅತಿಥಿಗಳಾಗಿ ಡಾ. ಕೆ.ಸಿ. ರಾಮಮೂರ್ತಿ ಬೆಂಗಳೂರು, ರಮೇಶ್ ರಾಜು, ಬ್ರಹ್ಮಶ್ರೀ ಟಿ.ಎಸ್ ವಿನೀತ್ ಭಟ್ ಹೈದರಾಬಾದ್, ಕಿಶೊರ್ ಆಳ್ವ, ಬಿ.ಟಿ. ರಾಮಚಂದ್ರಪ್ಪ ಬೆಂಗಳೂರು, ರಾಜೇಶ್ ಪಡಿಞಟಿಲ್, ಗಣೇಶ್ ರೈ ಬೆಂಗಳೂರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ ಬೆಂಗಳೂರು ಇವರನ್ನು ಸನ್ಮಾನಿಸಲಾಗುವುದು.
ಶ್ರೀ ಮಠದಲ್ಲಿ ಆ. 21 ರಂದು ಗುರುವಾರ ಸೂರ್ಯಾಸ್ತದಿಂದ ಆ.23 ಶನಿವಾರ ಸೂರ್ಯಾಸ್ತದ ತನಕ 48 ಗಂಟೆಗಳ ಅಖಂಡ ಭಜನೋತ್ಸವ ಜರಗಲಿರುವುದೆಂದು ಆಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

