ಬದಿಯಡ್ಕ: ದೇವರಿಗೆ ಬಾಲಾಲಯ ನಿರ್ಮಾಣವಾದರೆ ನಮ್ಮೆಲ್ಲರ ಜವಾಬ್ದಾರಿಯು ಮತ್ತಷ್ಟು ಹೆಚ್ಚಳವಾಗುತ್ತದೆ. ಜೀರ್ಣೋದ್ಧಾರ ಪ್ರಕ್ರಿಯೆ ಭರದಿಂದ ಸಾಗುತ್ತಿರುವ ಪೆರಡಾಲ ಕ್ಷೇತ್ರದಲ್ಲಿ ಸಂತಸದ ವಾತಾವರಣ ಕಂಡುಬರುತ್ತಿದೆ. ದೇವರ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಹೇಳಿದರು.
ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀದೇವರ ಬಾಲಾಲಯ ಪ್ರತಿಷ್ಠೆಯ ಸಂದರ್ಭ ಭಾನುವಾರ ಜರಗಿದ ಸಭೆಯಲ್ಲಿ ಅವರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀದೇವರ ಆಲಯ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪೂರ್ವಜನ್ಮದ ಸುಕೃತವಿದ್ದರೆ ಮಾತ್ರ ಇಂತಹ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ ಎಂದರು.
ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅನುಗ್ರಹ ಭಾಷಣದಲ್ಲಿ ದೇವಾಲಯವು ಅಭಿವೃದ್ಧಿಯಾದರೆ ಆ ನಾಡು ಸಂಪದ್ಭರಿತವಾಗುತ್ತದೆ. ಊರಿನ ಜನರಿಗೆ ಒಗ್ಗಟ್ಟಾಗಿ ಮುಂದುವರಿಯಲು ಇಂತಹ ಕಾರ್ಯಕ್ರಮಗಳು ಕಾರಣವಾಗುತ್ತದೆ. ಎಲ್ಲರ ಸಹಕಾರದಿಂದ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ಜರಗಲಿ ಎಂದು ಆಶಿಸಿದರು. ಉದ್ಯಮಿ ರಾಜೇಶ್ `Àಟ್ ಉಬರಡ್ಕ, ಕಾರ್ಮಾರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗೋಪಾಲ ಭಟ್ ಪಟ್ಟಾಜೆ, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಟ್ರಸ್ಟಿಗಳಾದ ಪಿ.ಜಿ. ಜಗನ್ನಾಥ ರೈ, ಕೃಷ್ಣ ಪೆರಡಾಲ, ಸೀತಾರಾಮ ನವಕಾನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಕೋಶಾಧಿಕಾರಿ ಸೂರ್ಯನಾರಾಯಣ ಬಿ ವಂದಿಸಿದರು.

.jpg)
