ಮಂಜೇಶ್ವರ: ವರ್ಕಾಡಿ ಪಂಚಾಯತಿ ಎಡರಂಗದ ಆಡಳಿತದ ಭ್ರಷ್ಟಾಚಾರ ತನಿಖೆ ಆಗಬೇಕು ಹಾಗೂ ದಬ್ಬಾಳಿಕೆ ಪ್ರವೃತ್ತಿ ಕೊನೆಗೊಳಿಸಬೇಕೆಂದು ಅಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು.
ಮಜೀರ್ಪಳ್ಳ ಪೇಟೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್ ಉದ್ಘಾಟಿಸಿ ಮಾತನಾಡಿ, ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಹಾಗೂ ಪಂಚಾಯತಿ ಅಧ್ಯಕ್ಷೆಯ ನೇತೃತ್ವದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಲೂಟಿಯನ್ನು ವಿವರಿಸಿದರು. ನಂತರ ಮೆರವಣಿಗೆ ಮೂಲಕ ಪಂಚಾಯತಿ ಕಚೇರಿಗೆ ಮಾರ್ಚ್ ನಡೆಸಲಾಯಿತು. ಕಚೇರಿ ಮುಂದೆ ಪೋಲೀಸರು ಮೆರವಣಿಗೆ ತಡೆದರು.
ಭಾಸ್ಕರ್ ಪೆÇಯ್ಯೇ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಮಾತನಾಡಿ, ಕೇರಳದ ಎಡರಂಗ ಸರ್ಕಾರ ಕುಟುಂಬಶ್ರೀ ಕಾರ್ಯಕರ್ತರನ್ನು ಕಮ್ಯುನಿಸ್ಟ್‍ರ ಕೆಲಸ ಮಾಡುವ ಜೀತದಾಳುಗಳನ್ನಾಗಿ ಮಾಡಿದೆ. ವರ್ಕಾಡಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಿಡಿಎಸ್ ಪದವಿ ಅಂದರೆ ಕಮ್ಯುನಿಸ್ಟ್ ಡೆಮೋಕ್ರೆಟಿಕ್ ಸೊಸೈಟಿ ಎಂದು ನಂಬಿದ್ದಾರೆ ಎಂದು ಆರೋಪಿಸಿದರು.
ಮುರಳೀಧರ ಯಾದವ್, ಮಣಿಕಂಠ ರೈ, ರಮಣಿ, ಸದಾಶಿವ ಮಂಟಮೆ, ದೂಮಪ್ಪ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾಗೇಶ್ ಬಳ್ಳೂರ್, ವಿವೇಕಾನಂದ, ಜಗದೀಶ್ ಚೆಂಡ್ಲಾ, ಮಮತಾ ಕುಲಾಲ್, ಆಶಾಲತಾ, ಪದ್ಮಾವತಿ, ಶ್ವೇತಾ ಪಾವಳ, ರವಿರಾಜ್, ಆನಂದ ತಚ್ಚಿರೆ, ಹರೀಶ್ ಕನ್ನಿಗುಳಿ ನೇತೃತ್ವ ನೀಡಿದರು. ರಕ್ಷಣ್ ಅಡಕಳ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು.




.jpg)
