ಮುಳ್ಳೇರಿಯ: ಕೇರಳದಾದ್ಯಂತ ರಾಮಾಯಣ ಮಾಸವಾಗಿ ಆಚರಿಸಲ್ಪಡುತ್ತಿರುವ ಕರ್ಕಾಟಕ ಮಾಸದಲ್ಲಿ ಹಲವಾರು ವರ್ಷಗಳಿಂದ ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ರಾಮಾಯಣ ಪ್ರವಚನ ಕಾರ್ಯಕ್ರಮ ಶ್ರೀಮಹಿಷಮರ್ಧಿನಿ ಭಜನ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯ, ಖ್ಯಾತ ಪ್ರವಚನಕಾರ ಗಂಗಾಧರ ರೈ ಮಠದಮೂಲೆ ಮತ್ತು ವಾಗ್ಮಿ, ನಿವೃತ್ತ ಉಪ ತಹಸೀಲ್ದಾರ್ ನಾರಾಯಣ ಗೋಸಾಡ ಅವರು ರಾಮಾಯಣ ಪ್ರವಚನವನ್ನು ನಡೆಸಿಕೊಟ್ಟರು.
ಶ್ರೀ ಕ್ಷೇತ್ರದ ಅರ್ಚಕ ರಾಘವೇಂದ್ರ ಚಡಗ ಅವರು ಪ್ರವಚನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮಹಿಷಮರ್ಧಿನಿ ಭಜನ ಸಂಘದ ಅಧ್ಯಕ್ಷ ಪ್ರಸಾದ ಮಣಿಯಾಣಿ ಗೋಸಾಡ, ಕಾರ್ಯದರ್ಶಿ ಸತೀಶ್ ರೈ ಗೋಸಾಡ ಹಾಗೂ ಶ್ರೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಸೇವಾ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ ಹಾಗೂ ಸೇವಾ ಸಮಿತಿಯ ಕಾರ್ಯದರ್ಶಿ ಸದಾಶಿವ ರೈ ಗೋಸಾಡ ಮುಂತಾದವರು ಉಪಸ್ಥಿತರಿದ್ದರು. ಚಾರ್ಯ ಸತೀಶ್ ಗೋಸಾಡ ಹಾಗೂ ಶಾನ್ವಿಕಾ ಪ್ರಶಾಂತ್ ಗೋಸಾಡ ಪ್ರಾರ್ಥನಾ ಗೀತೆ ಹಾಡಿದರು.





