ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಧೀಶಕ್ತಿ ಮಹಿಳಾ ಯಕ್ಷ ಬಳಗ, ತೆಂಕಿಲ ಪುತ್ತೂರು ಇವರಿಂದ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ರಚಿಸಿದ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀರಕ್ಷಾ ಹೆಗಡೆ, ಮದ್ದಳೆಯಲ್ಲಿ ಎನ್.ಜಿ.ಹೆಗಡೆ, ಚಂಡೆಯಲ್ಲಿ ಸಚಿನ್ ಆಚಾರ್ಯ, ಅರ್ಥದಾರಿಗಳಲ್ಲಿ ಶ್ರೀಕೃಷ್ಣನಾಗಿ ಪದ್ಮಾ ಕೆ.ಆರ್.ಆಚಾರ್ಯ, ಬಲರಾಮನಾಗಿ ಜಯಲಕ್ಷ್ಮಿ ವಿ.ಭಟ್, ಜಾಂಬವನಾಗಿ ಶಾಲಿನಿ ಅರುಣ್ ಶೆಟ್ಟಿ, ನಾರದನಾಗಿ ಗೀತಾ ಕೊಂಕೋಡಿ ಸಹಕರಿಸಿದರು.




.jpg)
