ಕಾಸರಗೋಡು: ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಕೇರಳ ರಾಜ್ಯ ಘಟಕ ಅಧ್ಯಕ್ಷರನ್ನಾಗಿ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಗಳಾದ ಕನ್ನಡ ಭವನ ಪ್ರಕಾಶನದ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷ ಡಾ. ಎಸ್ ಬಾಲಾಜಿ ಅವರ ನಿರ್ದೇಶಾನುಸಾರ ಈ ಆಯ್ಕೆ ನಡೆದಿದೆ.
ಕನ್ನಡ ಜಾನಪದ ಪರಿಷತ್ತು ಕಾಸರಗೋಡು ನೂತನ ಘಟಕದ ಔಪಚಾರಿಕ ಉದ್ಘಾಟನೆ ಶೀಘ್ರ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ 10ಮಂದಿ ಮೇರು ವ್ಯಕ್ತಿತ್ವಗಳನ್ನು "ಜಾನಪದ ಕುಲ ಪುರಸ್ಕಾರ "ಪ್ರಶಸ್ತಿ ಹಾಗೂ 5ತಂಡಗಳಿಗೆ "ಜಾನಪದ ಕುಲ ಸಾಧಕ ಪ್ರಶಸ್ತಿ "ನೀಡಿ ಗೌರವಿಸಲಿದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಯೊಂದಿಗೆ ಡಾ ವಾಮನ್ ರಾವ್ ಬೇಕಲ್ ಅವರನ್ನು ವಾಟ್ಸಪ್ ಮೂಲಕ ಸಂಪರ್ಕಿಸಬೇಕೆಂದು ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಭವನ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





