ಕಾಸರಗೋಡು: ಜಾನಪದ ಕಲೆಗಳ ಸಂರಕ್ಷಣೆಗಾಗಿ ಯುನೆಸ್ಕೋ ಮಾನ್ಯತೆ ಪಡೆದ, ನಾಡೋಜ ಡಾ. ಎಚ್ ಎಲ್ ನಾಗೇಗೌಡ ಅವರಿಂದ ಸ್ಥಾಪನೆಗೊಂಡಿರುವ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ವೈದ್ಯ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕøತ ಡಾ ಮಲ್ಲಿಕಾರ್ಜುನ ಎಸ್ ನಾಸಿ ಅವರನ್ನು ಕೇಂದ್ರ ಸಮಿತಿ ಅಧ್ಯಕ್ಷ ಡಾ. ಹಿ ಚಿ ಬೋರಲಿಂಗಯ್ಯ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ
ಮೂಲತಃ ಕಲಬುರ್ಗಿ ಜಿಲ್ಲೆ ನಿವಾಸಿಯಾಗಿರುವ ಡಾ. ಮಲ್ಲಿಕಾರ್ಜುನ ನಾಸಿ ಅವರು ವೈದ್ಯಕೀಯ ಪದವಿ ಪಡೆದ ನಂತರ 2004ರಲ್ಲಿ ಕೇರಳದ ಕೊಚ್ಚಿನ್‍ಗೆ ಆಗಮಿಸಿ ತಮ್ಮ ವೈದ್ಯಕೀಯ ಸೇವೆ ಆರಂಭಿಸಿದ್ದರು.
ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮುಂಬೈನಲ್ಲಿ ನಡೆದ ಹೊರನಾಡ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಕೇರಳದ ಅನೇಕ ಸಂಘ ಸಂಸ್ಥೆಗಳು ಇವರ ಜನಪರ ಸೇವೆಯನ್ನು ಗುರುತಿಸಿ ಗೌರವಿಸಿದೆ ಇತ್ತೀಚಿಗೆ ತಿರುವನಂತಪುರದ ಭಾರತ್ ಭವನದಲ್ಲಿ ನಡೆದ ಅನಂತಪುರಿ ಗಡಿನಾಡ ಕನ್ನಡ ಉತ್ಸವದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪದಾಧಿಕಾರಿಗಳು:
ಸಂಘಟನೆ ಇತರ ಪದಾಧಿಕಾರಿಗಳಾಗಿ ಮಂಜುನಾಥ ಆಳ್ವ ಮಡ್ವ ಉಪಾಧ್ಯಕ್ಷ, ರವಿ ನಾಯ್ಕಾಪು ಪ್ರಧಾನ ಕಾರ್ಯದರ್ಶಿ, ಮಹಾಲಿಂಗ ಕೆ ಕಾರ್ಯದರ್ಶಿ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಕೋಶಾಧಿಕಾರಿ, ಪೆÇ್ರ ಎ ಶ್ರೀನಾಥ್, ಎ ಆರ್ ಸುಬ್ಬಯಕಟ್ಟೆ ಗೌರವ ಸಲಹೆಗಾರರು, ಸದಸ್ಯರಾದ ಗಂಗಾಧರ ತೆಕ್ಕೆಮೂಲೆ, ಮಹೇಶ್ ಪುಣಿಯೂರು, ಸಂದ್ಯಾಗೀತಾ ಬಾಯಾರು, ಪುರುಷೋತಮ ಬಿ.ಎಂ, ಅಖಿಲೇಶ್ ನಗುಮುಗಮ್, ಜೆಡ್.ಎ ಕಯ್ಯಾರ್, ಶ್ರೀಕಾಂತ್ ನೆಟ್ಟಣಿಗೆ, ಅಸೀಸ್ ಚೇವಾರ್ ಅವರನ್ನು ಆಯ್ಕೆ ಮಾಡಲಾಯಿತು.





