ಕಾಸರಗೋಡು: ಏಳರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆಯ ಸಮೀಪ ಸಂಬಂಧಿ ವಿರುದ್ಧ ಚಂದೇರ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ಸಂದರ್ಭ ಬಾಲಕಿ ತನಗಾದ ಕಿರುಕುಳದ ಬಗ್ಗೆ ಶಿಕ್ಷಕಿಗೆ ನೀಡಿದ ಮಾಹಿತಿಯನ್ವಯ ಚೈಲ್ಡ್ ಲೈನ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. 2025 ಜನವರಿಯಿಂದ ತೊಡಗಿ ಆಗಸ್ಟ್ 3ರ ವರೆಗೆ ವಿವಿಧ ದಿವಸಗಳಲ್ಲಾಗಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.




