ಕಾಸರಗೋಡು: ಕಾಞಂಗಾಡ್‍ನಿಂದ ಪೆರಿಯ ಮೂನಾಂಕಡವು, ಕುಂಡಂಗುಳಿ, ಬಂದಡ್ಕ, ಕನ್ನಡಿತೋಡು ಹಾದಿಯಾಗಿ ಸುಳ್ಯ ರೂಟಲ್ಲಿ ಹೊಸ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಸರ್ಕಾರದ ಮಂಜೂರಾಥಿ ಲಭಿಸಿದೆ. ಬಸ್ ಆರಂಭದ ದಿನಾಂಕ ಶೀಘ್ರ ಪ್ರಕಟಗೊಳ್ಳಲಿರುವುದಾಗಿ ಶಾಸಕ ಸಿ.ಎಚ್ ಕುಞಂಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಲೆನಾಡು ಪ್ರದೇಶದ ಜನತೆಗೆ ಸುಳ್ಯದೊಂದಿಗೆ ಸುಲಭ ಸಂಪರ್ಕ ಕಲ್ಪಿಸಲು ಕೆಎಸ್‍ಆರ್‍ಟಿಸಿ ಕಾಞಂಗಾಡ್ ಡಿಪೆÇೀದಿಂದ ಹೊಸ ಬಸ್ ಸಂಚಾರ ಆರಂಭಗೊಳ್ಳಳಿದೆ.
ಶಾಸಕ ಸಿ.ಎಚ್.ಕುಞಂಬು ಅವರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಪ್ರದೇಶದ ಜನತೆಯ ಪ್ರಯಾಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಹಾದಿಯಾಗಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಿಗೆ ಅವಕಾಶ ನೀಡುವಂತೆ ಮಾಡಿಕೊಂಡಿದ್ದ ಮನವಿಯನ್ವಯ ಹೊಸ ಬಸ್ ಸೇವೆ ಮಂಜೂರಾಗಿ ಲಭಿಸಿದೆ.
ಕಾಞಂಗಾಡ್‍ನಿಂದ ಬೆಳಿಗ್ಗೆ 6.40 ಸಂಚಾರ ಆರಂಭಿಸುವ ಬಸ್ ದಿನದಲ್ಲಿ ಎರಡು ಟ್ರಿಪ್ ಸುಳ್ಯಕ್ಕೆ ನಡೆಸಲಿದೆ. ಸುಳ್ಯದಿಂದ ಸಂಜೆ 5ಕ್ಕೆ ಕಾಞಂಗಾಡು ಆಗಮಿಸಿ, ನಂತರ ಕಾಸರಗೋಡಿಗೆ ತೆರಳಿ ರಾತ್ರಿ 8ಕ್ಕೆ ಕಞಂಗಾಡಿಗೆ ವಾಪಸಾಗಲಿದೆ.
ಬಸ್ ಸೇವೆಯಿಂದ ಪೆರಿಯ, ಮೂನಾಂಕಡವ್, ಕುಂಡಂಗುಳಿ, ಕುತ್ತಿಕ್ಕೋಲ್, ಬಂದಡ್ಕ ಮುಂತಾದ ಪ್ರದೇಶಗಳ ಜನರಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ.





