ಕಾಸರಗೋಡು: ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಸಹಕಾರಿ ವಲಯದಲ್ಲಿ ಪರಿಸರ ಪ್ರವಾಸೋದ್ಯಮ ಅನ್ವಯ ಮುಳಿಯಾರು ಪಂಚಾಯಿತಿಯ ಕಾನತ್ತೂರು ಸನಿಹ ಚಂದ್ರಗಿರಿ ಹೊಳೆ ದಡದಲ್ಲಿ ತಲೆಯೆತ್ತಿರುವ ಪುಲಿಯಂತುರುತ್ತ್ ಇಕೋ ಟೂರಿಸಂ ವಿಲ್ಲೇಜ್‍ನ ಉದ್ಘಾಟನೆ ಆ. 11ರಂದು ಬೆಳಗ್ಗೆ 9ಕ್ಕೆ ರಾಜ್ಯ ಸಹಕಾರಿ-ಮುಜರಾಯಿ ಖಾತೆ ಸಚಿವ ವಿ.ಎನ್ ವಾಸವನ್ ನೆರವೇರಿಸುವರು. ಚಂದ್ರಗಿರಿ ಕೋ ಟೂರಿಸಂ ಕೋ ಓಪರೇಟಿವ್ ಸೊಸೈಟಿ ಅಧೀನದಲ್ಲಿ ಪ್ರವಾಸೋದ್ಯಮ ಕೇಂದ್ರ ಆರಂಭಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷರೂ ಆಘಿರುವ ಸಿಜಿ ಮ್ಯಾಥ್ಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದ್ವೀಪ ಸದೃಶ ಸುಂದರ ತಾಣವನ್ನು ನಾಲ್ಕೂ ಭಾಗದಿಂದ ಚಂದ್ರಗಿರಿ ಹೊಳೆ ಆವರಿಸಿದ್ದು, ಇಲ್ಲಿಗೆ ತೆರಳಲು ಸುಮರು ನೂರೈವತ್ತು ಮೀ. ಉದ್ದದ ಸುಂದರ ತೂಗುಸೇತುವೆ ನಿರ್ಮಿಸಲಾಗಿದೆ. ಹವಣಿಯಂತ್ರಿತ ಸುಸಜ್ಜಿತ ಸಭಾಂಗ, ತೆರೆದ ಸಭಾಂಗಣ, ಎಂಟು ಕಾಟೇಜ್‍ಗಳು, ಹೋಟೆಲ್ ಸಮುಚ್ಛಯ, ಹವಾನಿಯಂತ್ರಿತ ವಸತಿಗೃಹ, ಮಕ್ಕಳಿಗೆ ಆಟವಾಡುವ ಕೇಂದ್ರವನ್ನೊಳಗೊಂಡ ಪ್ರಕೃತಿ ರಮಣೀಯ ಪ್ರವಾಸೋದ್ಯಮ ತಾಣವಾಗಿದೆ. ಸುಮಾರು ಐದುವರೆ ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಕೇಂದ್ರವನ್ನು ನಿರ್ಮಿಸಲಾಗಿದ್ದು, ಮತ್ತಷ್ಟು ಅಭಿವೃದ್ಧೀ ಕಾರ್ಯಗಳ ಯೋಜನೆಯಿರಿಸಿಕೊಳ್ಳಲಾಗಿದೆ
ಶಾಸಕ ಸಿ.ಎಚ್ ಕುಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಯಿಥಿಯಾಗಿ ಭಾಗವಹಿಸುವರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಎಂ. ರಾಜಗೋಪಾಳನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಚಿತ್ರನಟ ಸಂತೋಷ್ ಕಿಯಾಟ್ಟೂರ್ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿ ನಿರ್ದೇಶಕರಾದ ಬಿ.ಕೆ ನಾರಾಯಣ್, ಬಿ. ಭವಾನಿ, ಬಿ. ವಿಜಯನ್, ಅಶೋಕನ್ ಎ, ಜಯಚಂದ್ರ ವೈಲಂಗೋಡ್, ನಿಕೇಶ್ ಕುಮಾರ್ ಜಿ.ಕೆ ಉಪಸ್ಥಿತರಿದ್ದರು.




