ಬದಿಯಡ್ಕ: ಕೇರಳ ರಾಜ್ಯ ಕಾಂಗ್ರೆಸ್ ಸಮಿತಿಯ ಆದೇಶದಂತೆ ವಾರ್ಡು ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ನಡೆಯುವ ಗೃಹ ಸಂದರ್ಶನ ಜನಸಂಪರ್ಕ ಕಾರ್ಯಕ್ರಮದ ಬದಿಯಡ್ಕ ಮಂಡಲ ಮಟ್ಟದ ಉದ್ಘಾಟನೆಯನ್ನು ಸೇವಾದಳದ ರಾಜ್ಯ ಸಮಿತಿ ಅಧ್ಯಕ್ಷ ರಮೇಶನ್ ಕರುವಚೇರಿ ಅವರು ವಿದ್ಯಾಗಿರಿಯಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ಲಕ್ಷ್ಮೀ ಅಮ್ಮ ಅವರಿಗೆ ಕಿರುಬರಹ ಹಾಗೂ ವಾರ್ಡು ಕಾಂಗ್ರೆಸ್ ಸಮಿತಿಯ ಕೂಪನ್ ನೀಡಿ ನೆರವೇರಿಸಿದರು.
ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ. ಚಂದ್ರಹಾಸ ರೈ, ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ಗಂಗಾಧರ ಗೋಳಿಯಡ್ಕ, ಖಾದರ್ ಮಾನ್ಯ, ಮಹಿಳಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜನಪ್ರತಿನಿಧಿ ಜಯಶ್ರೀ, ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ಚಂದ್ರಹಾಸನ್ ಮಾಸ್ತರ್, ರಾಮ ಪಟ್ಟಾಜೆ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಮಂಡಲ ಕಾಂಗ್ರೆಸ್ ಸಮಿತಿ ನೇತಾರರಾದ ಕೃಷ್ಣದಾಸ್ ದರ್ಬೆತ್ತಡ್ಕ, ರವಿ ಕುಂಟಾಲು ಮೂಲೆ, ಸತೀಶ್ ಪೆರುಮುಂಡ, ಕೇಶವ .ಬಿ, ಡೆನ್ನೀಸ್ ಡಿ ಸೋಜ ಉಪಸ್ಥಿತರಿದ್ದು ಮಾತನಾಡಿದರು. ವಾರ್ಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನ್ಸಂಟ್ ಸ್ವಾಗತಿಸಿ, ವಂದಿಸಿದರು.




.jpg)
