ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮುಖಮಂಟಪದ ಲೋಕಾರ್ಪಣಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆಯಲಾಯಿತು.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀಗಳನ್ನು ವೈದಿಕ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಭಟ್ ಉಪ್ಪಂಗಳ ಹಾಗೂ ವಿದ್ಯಾಗೌರಿ ಉಪ್ಪಂಗಳ ಇವರು ಭೇಟಿ ಮಾಡಿದರು. ಸೆ. 13 ಹಾಗೂ 14 ರಂದು ನಡೆಯಲಿರುವ ಲೋಕಾರ್ಪಣಾ ಸಮಾರಂಭವು ಯಶಸ್ವಿಯಾಗಿ ಜರಗಲಿ ಎಂದು ಹರಸಿ ಮಂತ್ರಾಕ್ಷತೆಯನ್ನು ನೀಡಿದರು. ಈ ಹಿಂದೆ ಶ್ರೀಗಳು ಶ್ರೀಮಂದಿರಕ್ಕೆ ಆಗಮಿಸಿ ಮುಖಮಂಟಪ ನಿರ್ಮಾಣಕ್ಕೆ ಸುವರ್ಣಮಂತ್ರಾಕ್ಷತೆಯನ್ನು ನೀಡಿ ನಿಸಂಗ್ರಹಕ್ಕೆ ಚಾಲನೆ ನೀಡಿದ್ದರು.




.jpg)
