ಕಾಸರಗೋಡು: ರಾಜ್ಯವನ್ನು ನಡುಗಿಸಿರುವ ಪೆರಿಯಾ ಅವಳಿ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಉದುಮ ಮಾಜಿ ಶಾಸಕ ಮತ್ತು ಸಿಪಿಎಂ ನೇತಾರ ಕೆ.ವಿ. ಕುಞÂರಾಮನ್ ಅವರನ್ನು ಕೇರಳ ಜಾನಪದ ಅಕಾಡೆಮಿಯ ಉಪಾಧ್ಯಕ್ಷರನ್ನಾಗಿ ನೇಮಿಸಿರುವುದು ಕಾನೂನು ವ್ಯವಸ್ಥೆ ಮೇಲಿನ ಸವಾಲೆಂದು ಬಿಜೆಪಿ ಕೋಯಿಕ್ಕೋಡ್ ವಲಯಾಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗೆ ಕೇರಳ ಜಾನಪದ ಅಕಾಡಮಿಯಂತಹ ಸಾಂಸ್ಕøತಿಕ ಸಂಸ್ಥೆಗಳ ಜವಾಬ್ದಾರಿಯನ್ನು ನೀಡಿರುವುದು ಖಂಡನೀಯ. ಜಾನಪದ ಅಕಾಡೆಮಿ ಈ ನಿಲುವು ಪ್ರಜಾಪ್ರಭುತ್ವ ವಿರೋಧಿಯಾಘಿದ್ದು, ಈ ನೇಮಕಾತಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಶ್ರೀಕಾಂತ್ ಒತ್ತಾಯಿಸಿದರು.
ಅವಳಿ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಲ್ಪಟ್ಟ ಕೆ ವಿ ಕುಞÂರಾಮನ್ ಅವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, ಆ ತೀರ್ಪು ಈಗ ಜಾರಿಯಲ್ಲಿದೆ. ಶಿಕ್ಷೆಯನ್ನು ಕಾರ್ಯಗತಗೊಳಿಸುವುದಕ್ಕೆ ಮಾತ್ರ ಹೈಕೋರ್ಟಿನ ತಡೆಯಾಜ್ಞೆಯಿದ್ದು, ಈ ಮಧ್ಯೆ ರಾಜ್ಯದ ಸಂಸ್ಕøತಿ ಪರಂಪರೆಯನ್ನೊಳಗೊಂಡ ಜಾನಪದ ಅಕಾಡಮಿಗೆ ಇಂತಹ ವ್ಯಕ್ತಿಗಳ ನೇಮಕಾತಿಯ ಮೂಲಕ ಸಿಪಿಎಂ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಅಪರಾಧಿಗಳನ್ನು ರಕ್ಷಿಸುವ ಮತ್ತು ಪೆÇ್ರೀತ್ಸಾಹಿಸುವ ನಿಲುವನ್ನು ತೆಗೆದುಕೊಳ್ಳುತ್ತಿದೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.




