ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಹಾಗೂ ನೃತ್ಯವಲ್ಲರಿ ಪ್ರಸ್ತುತಿಗೊಂಡಿತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಕು.ಸೂಕ್ತಿ ಭಟ್ ಜಿ.ಸಿ.ಮೈಸೂರು ಅವರಿಂದ ಹಾಡುಗಾರಿಕೆ ನಡೆಯಿತು. ಮೃದಂಗದಲ್ಲಿ ವೆಂಕಟ ಯಶಸ್ವಿ ಕಬೆಕ್ಕೋಡು, ವಯಲಿನ್ ನಲ್ಲಿ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಸಹಕರಿಸಿದರು.
ಬಳಿಕ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ತಂಡದವರಿಂದ ನೃತ್ಯವಲ್ಲರಿ ವಿದುಷಿಃ ವಿದ್ಯಾ ಮನೋಜ್ ನಿರ್ದೇಶನದಲ್ಲಿ ನಡೆಯಿತು.







