HEALTH TIPS

ಕಳೆದ ಒಂಬತ್ತು ವರ್ಷದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಅಭಿವೃದ್ಧಿ-ಮೇಲ್ಪರಂಬ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಸಿಎಂ ಪಿಣರಾಯಿ ವಿಜಯನ್ ಅಭಿಪ್ರಾಯ

ಕಾಸರಗೋಡು: ಕಳೆದ ಒಂಬತ್ತು ವರ್ಷಗಳಲ್ಲಿ ಪೆÇಲೀಸ್ ಪಡೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವಿಷಯದಲ್ಲಿ ಪ್ರಮುಖ ಬದಲಾವಣೆ ತಂದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರು ಮೂಲಸೌಕರ್ಯ ಅಭಿವೃದ್ಧಿಯ ಅಂಗವಾಗಿ, ವಿವಿಧ ಜಿಲ್ಲೆಗಳಲ್ಲಿನ ಪೆÇಲೀಸ್ ಇಲಾಖೆಗಾಗಿ ಪೂರ್ಣಗೊಳಿಸಲಾದ 13 ಯೋಜನೆಗಳನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಇಂದು ಪೆÇಲೀಸ್ ಠಾಣೆಗಳ ಪರಿಕಲ್ಪನೆಯೇ ಬದಲಾಗಿದೆ. ಜನಸ್ನೇಹಿ ವಾತಾವರಣದ ಭಾಗವಾಗಿ, ಪೆÇಲೀಸ್ ಠಾಣೆಯು ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ, ಸಹಾಯ ಕೇಂದ್ರಗಳು ಮತ್ತು ಅಂಗವಿಕಲರು, ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಪೊಲೀಸ್ ಇಲಾಖೆಯಲ್ಲಿ  ಉನ್ನತ ಶಿಕ್ಷಣ ಪಡೆದ ಮತ್ತು ಉತ್ಸಾಹಭರಿತ ಯುವಕರನ್ನು ಸೇರಿಸಿಕೊಳ್ಳುವುದರಿಂದ ಒಟ್ಟಾರೆ ದಕ್ಷತೆ ಹೆಚ್ಚಾಗಿದೆ ಎಂದು ತಿಳಿಸಿದರು.

ಕಾಸರಗೋಡು ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಬಳಿ ಮೇಲ್ಪರಂಬ ಪೊಲೀಸ್ ಠಾಣೆ, ಬೇಕಲ ಪೊಲೀಸ್ ಉಪ ವಿಭಾಗ ಕಟ್ಟಡವನ್ನು ಸಿಎಂ ಉದ್ಘಾಟಿಸಿದರು. ಮೇಲ್ಪರಂಬ ಪೊಲೀಸ್ ಠಾಣೆ ವಠಾರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ ಕೆ ಶಶೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಜ ಸಿ.ಎಚ್. ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಸರಗೋಡು ಬ್ಲಾಕ್ ಪಣಚಾಯಿತಿ ಅಧ್ಯಕ್ಷೆ ಸಿ.ಕೆ ಸೈಮಾ, ಇತರ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. 

12,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಮತ್ತು ಮೂರು ಮಹಡಿಗಳನ್ನು ಹೊಂದಿದ್ದು,  ನೆಲ ಮಹಡಿಯಲ್ಲಿ ಮೇಲ್ಪರಂಬ ಪೆÇಲೀಸ್ ಠಾಣೆ, ಎರಡನೇ ಮಹಡಿಯಲ್ಲಿ ಬೇಕಲ ಉಪವಿಭಾಗದ ಪೆÇಲೀಸ್ ಕಚೇರಿ ಚಟುವಟಿಕೆಗೆ ಹಾಗೂ ಮೂರನೇ ಮಹಡಿ ಸಂಪೂರ್ಣವಾಗಿ ತನಿಖಾ ಉದ್ದೇಶಗಳಿಗಾಗಿ ಬಳಕೆಯಾಗಲಿದೆ. ಸುಮಾರು  ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಐಪಿಎಸ್ ಸ್ವಾಗತಿಸಿದರು. ಮೇಲ್ಪರಂಬ ಪೆÇಲೀಸ್ ಠಾಣೆಯ ಎಸ್‍ಎಚ್‍ಒ ಸಂತೋಷ್ ಕುಮಾರ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries