ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಉದುಮ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಲಾದ ಹೊಸ ಕಟ್ಟಡವನ್ನು ಶಾಸಕ ಸಿ.ಎಚ್. ಕುಂಞಂಬು ಶನಿವಾರ ಉದ್ಘಾಟಿಸಿದರು. ಉದುಮ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ. ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮಂಜೂರಾದ 55 ಲಕ್ಷ ರೂ.ಗಳನ್ನು ಬಳಸಿಕೊಂಡು ಆಡಳಿತಾತ್ಮಕ ಕಚೇರಿ ಸೌಲಭ್ಯಗಳನ್ನು ಹೊಂದಿರುವ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರತಿದಿನ 300 ರೋಗಿಗಳು ಭೇಟಿ ನೀಡುವ ಆಸ್ಪತ್ರೆಯಲ್ಲಿ ಹೊಸ ಆಡಳಿತಾತ್ಮಕ ಬ್ಲಾಕ್ ಅನ್ನು ನಿರ್ಮಿಸಲಾಗಿದೆ. ವೈದ್ಯಾಧಿಕಾರಿ, ಸಾರ್ವಜನಿಕ ಆರೋಗ್ಯ ಇಲಾಖೆ, ಕಚೇರಿ ಮತ್ತು ಸಭಾಂಗಣ ಇಲ್ಲಿ ಕಾರ್ಯನಿರ್ವಹಿಸಲಿದೆ. ಕುಟುಂಬ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾದ ಈ ಆಸ್ಪತ್ರೆಯಲ್ಲಿ, ಮೂವರು ವೈದ್ಯಾಧಿಕಾರಿಗಳು, ಸಂಜೆ ಒಪಿ, ಅತ್ಯಾಧುನಿಕ ಔಷಧಾಲಯ ಮತ್ತು ಪ್ರಯೋಗಾಲಯ ಸೇರಿದಂತೆ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿದೆ. ಆಸ್ಪತ್ರೆಯ ಭೌತಿಕ ಪರಿಸ್ಥಿತಿಗಳ ಅಭಿವೃದ್ಧಿಯ ಮೂಲಕ ಆಸ್ಪತ್ರೆ ಸಂಪೂರ್ಣವಾಗಿ ರೋಗಿ ಸ್ನೇಹಿಯಾಗುತ್ತಿದೆ.
ಕಾಞಂಗಾಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಂ.ಕೆ. ವಿಜಯನ್, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಡಾ.ಪಿ.ವಿ.ಅರುಣ್, ಉದುಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಬೀವಿ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸುಧಾಕರನ್, ಸದಸ್ಯರಾದ ವಿ.ಕೆ.ಅಶೋಕನ್, ನಬೀಸಾ ಪಾಕ್ಯಾರ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ವಿ.ರಾಜೇಂದ್ರನ್, ಕೆ.ವಿ.ಶ್ರೀಧರನ್, ಕೆ.ವಿ.ಶ್ರೀಧರನ್ ಮಾತನಾಡಿದರು. ಉದುಮ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಝೈನಬಾ ಅಬೂಬಕ್ಕರ್ ಸ್ವಾಗತಿಸಿ, ಉದುಮ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಯಿಂಜಿ ವಂದಿಸಿದರು.

.jpg)
.jpg)
