ಮಂಜೇಶ್ವರ : ಉದ್ಯಾವರ ಸಾವಿರ ಜಮಾಹತ್ ಮಸೀದಿಯ ಅಧೀನದಲ್ಲಿರುವ ಅನಿವಾಸಿ ಭಾರತೀಯರ ಉದ್ಯಾವರ ದುಬೈ ಕಮಿಟಿ ಹಾಗೂ ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಉದ್ಯಾಪರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಇತ್ತೀಚೆಗೆ ನಡೆಯಿತು.
ಉದ್ಯಾವರ ದುಬೈ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಗಫೂರ್ ಗುಚ್ಚಿ ರವರ ಅಧ್ಯಕ್ಷತೆಯಲ್ಲಿ ನಡೆದ ವೈದ್ಯಕೀಯ ಶಿಬಿರವನ್ನು ಉದ್ಯಾವರ ಸಾವಿರ ಜಮಾಹತ್ ಅಧ್ಯಕ್ಷ ಸಯ್ಯದ್ ಸೈಪುಲ್ಲಾ ತಂಙಳ್ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಅಬುಬಕ್ಕರ್ ಸಿದ್ದೀಖ್ ಉದ್ಯಾವರ, ಸಲೀಂ ಉದ್ಯಾವರ, ಮುಕ್ತಾರ್ ಎ, ರಿಯಾಝ್ ಉದ್ಯಾವರ, ಮುಂತಾಸ್ ಸಮೀರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಅಸ್ತಮಾ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ವಿಭಾಗ, ಬೆನ್ನು ಮೂಳೆ ಚಿಕಿತ್ಸೆ, ಮೊಣಕಾಲು ಚಿಕಿತ್ಸೆ, ಅಪೆಂಡಿಕ್ಸ್ ಅಲ್ಸರ್, ಹರ್ನಿಯಾ, ಮೂಲವ್ಯಾದಿ, ಗರ್ಭಕೋಶದ ಗಡ್ಡೆ, ಕಿವಿ, ಮೂಗು, ಗಂಟಲು, ಥೈರಾಯಿಡ್, ಸಂಧಿವಾತ, ಉದರ ಸಂಬಂಧಿ ಕಾಯಿಲೆಗಳು, ವೇರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ, ಚರ್ಮರೋಗ ತಪಾಸಣೆ ನಡೆಸಲಾಯಿತು. ಅದೇ ರೀತಿ ಶಿಬಿರದಲ್ಲಿ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಜೊತೆಯಾಗಿ ಉಚಿತ "ಅಭಾ" ಕಾರ್ಡ್ ನೋಂದಾವಣಿ ನಡೆಸಲಾಯಿತು.
ಉದ್ಯಾವರ ದುಬೈ ಕಮಿಟಿ ಕಳೆದ ಹಲವಾರು ವರ್ಷಗಳಿಂದ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿ ಕೊಂಡು ಬರುತ್ತಿದೆ. ಜೊತೆಯಾಗಿ ಈ ಸಮಿತಿಯ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲೂ ವಿದ್ಯಾಭ್ಯಾಸದಿಂದ ವಂಚಿತರಾಗುವ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳಿಗೆ ಕಲಿಕೆಗೆ ಬೇಕಾದ ಸಹಾಯ ಸಹಕಾರಗಳನ್ನು ನೀಡುತ್ತಾ ಬರುತ್ತಿದೆ. ಅದೇ ರೀತಿ ರೋಗ ಪೀಡಿತರಿಗೆ ವೈದ್ಯಕೀಯ ಸಹಾಯ, ಬಡ ಕುಟುಂಬಗಳಿಗೆ ಆರ್ಥಿ ಸಹಾಯ ಸೇರಿದಂತೆ ವಿವಿಧ ರೀತಿಯ ಸಮಾಜಮುಖಿ ಕಾರ್ಯಗಳಲ್ಲೂ ಸ್ತುತ್ಯರ್ಹ ಸೇವೆಗಳನ್ನು ನೀಡುತ್ತಾ ಬಂದಿದೆ. ಕ್ರೀಡಾ ವಲಯದಲ್ಲೂ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸಂಘಟನೆಯ ವತಿಯಿಂದ ಪೆÇ್ರೀತ್ಸಾಹ ನೀಡಲಾಗುತ್ತಿದೆ.
ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡಕೊಂಡರು. ಅಲ್ ಸಖಾಫ್ ಶಾಲಾ ಪ್ರಬಂಧಕ ಮಮ್ಮಂಞÂ ಸ್ವಾಗತಿಸಿ, ಕಣಚೂರು ಆಸ್ಪತ್ರೆ ಪಿ.ಆರ್.ಒ. ಅಬ್ದುಲ್ಲ ಅಕ್ಕರ ವಂದಿಸಿದರು.



.jpg)
