ಉಪ್ಪಳ: ದೇಲಂತೊಟ್ಟು ಬಜೆ ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ರಾಮಾಯಣ ಪಾರಾಯಣ ಹಾಗೂ ಪ್ರವಚನ ಮಂಗಳವಾರ ಸಂಪನ್ನಗೊಂಡಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ರಾಧಾಲಕ್ಷ್ಮಿ ಮಯ್ಯ ಹಾಗೂ ಲಕ್ಷ್ಮೀ ನಾರಾಯಣ ಮಯ್ಯ ದೀಪ ಬೆಳಗಿಸಿ ಸಮಾರೋಪ ಉದ್ಘಾಟಿಸಿದರು. ಹಿರಿಯರಾದ ಶಶಿಕಲಾ ಗೋಪಾಲಕೃಷ್ಣ ಮಯ್ಯ ಶುಭ ಹಾರೈಸಿದರು ಸೇವಾ ಸಮಿತಿಯ ಅಧ್ಯಕ್ಷ ಭುಜಂಗ ಶೆಟ್ಟಿ ಕಂಗ್ವೆ, ರಾಜೇಶ ನ್ಯಾಕ್, ಬಾಬು ಬಿ.ಸಿ.ರೋಡ್, ಸುರೇಶ ಶೆಟ್ಟಿ ಹೇರೂರು, ಕಮಲ ಶೆಟ್ಟಿ ಕಂಗ್ವೆ, ದೇವರಾಯ ಮಯ್ಯ, ಮುರಳೀಧರ ಮಯ್ಯ, ಸುಬ್ರಹ್ಮಣ್ಯ ಮಯ್ಯ ಹಾಗೂ ಭಕ್ತಾದಿಗಳು ಪಾಲ್ಗೊಂಡರು. ಸೀತಾಪಹಾರ, ಜಟಾಯು ಮೋಕ್ಷದ ಕಥಾ ಭಾಗದ ಪ್ರಸ್ತುತಿಯೊಂದಿಗೆ ಸಮಾರೋಪಗೊಂಡಿತು.

.jpg)
