ಲಂಡನ್: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್ ಸರ್ಕಾರ ಮುಂದಾಗಿದೆ.
ಸಮಾಜದ ಸ್ವಾಸ್ಥ್ಯ ಕಾಯ್ದುಕೊಳ್ಳುವ ಉದ್ದೇಶದಿಂದ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಪರಾಧಿಗಳನ್ನು ಸಮಾಜದಿಂದ ದೂರ ಇಡುವಂತಹ ಈ ಕ್ರಮವನ್ನು ಅನುಸರಿಸಲು ಚಿಂತನೆ ನಡೆಸುತ್ತಿರುವುದಾಗಿ ಬ್ರಿಟನ್ ಕಾನೂನು ಸಚಿವಾಲಯದ ಕಾರ್ಯದರ್ಶಿ ಶಬಾನಾ ಮೊಹಮ್ಮದ್ ಹೇಳಿದ್ದಾರೆ.




