ಬದಿಯಡ್ಕ: ಬಿಜೆಪಿ ಕುಂಬ್ಡಾಜೆ ಪಂಚಾಯತಿ 12ನೇ ವಾರ್ಡ್ ಆಗಲ್ಪಾಡಿ ಇದರ ಸಮಾವೇಶ ಪಡುಮೂಲೆ ನಾಗರಾಜ ಮಣಿಯಾಣಿ ಇವರ ಮನೆಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ವಹಿಸಿದ್ದರು. ಸಮಾವೇಶವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಪಂಚಾಯಿತಿ ಸಮಿತಿ ಅಧ್ಯಕ್ಷ ಹರೀಶ್ ಕುಣಿಕುಳ್ಳಾಯ ಹಾಗು ವಾರ್ಡ್ ಸದಸ್ಯೆ ಮೀನಾಕ್ಷಿ ಎಸ್ ಅವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ವಾರ್ಡ್ ಸಂಚಾಲಕ ಅಂಬುಜಾಕ್ಷಾ ನಡುಮೂಲೆ ಉಪಸ್ಥಿತರಿದ್ದರು. ವಾರ್ಡ್ ಸಹ ಸಂಚಾಲಕ ರಾಘವೇಂದ್ರ ಮೈಲ್ ತೊಟ್ಟಿ ಸ್ವಾಗತಿಸಿ, ಅನಿಲ್ ಪಡುಮೂಲೆ ವಂದಿಸಿದರು. ಶಿವಾನಂದ ನಡುಮೂಲೆ ನಿರೂಪಿಸಿದರು. ಕುಮಾರಿ ವಿದ್ಯಾಲಕ್ಷ್ಮಿ ಅವರ ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಜನಮನಗಣದೊಂದಿಗೆ ಮುಕ್ತಾಯವಾಯಿತು.

.jpg)
