ಕಾಸರ್ಗೋಡು: ಪೆರಿಯ ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಪೆರೋಲ್ ನೀಡುವುದನ್ನು ವಿರೋಧಿಸಿ ಕಲ್ಯಾಟ್‍ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಘರ್ಷಣೆ ಸಂಭವಿಸಿದೆ. ಪೋಲೀಸರು ಬ್ಯಾರಿಕೇಡ್‍ಗಳನ್ನು ಬಳಸಿ ಮೆರವಣಿಗೆಯನ್ನು ತಡೆದರು, ಕಾರ್ಯಕರ್ತರು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆಯಿತು.
ಬ್ಯಾರಿಕೇಡ್‍ಗಳನ್ನು ದಾಟಲು ಯತ್ನಿಸಿದ ಕಾರ್ಯಕರ್ತರ ಮೇಲೆ ಪೋಲೀಸರು ಜಲಫಿರಂಗಿಗಳನ್ನು ಬಳಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ, ಕಲ್ಯಾಟ್‍ನಲ್ಲಿ ಪೋಲೀಸರು ಪ್ರಬಲ ಭದ್ರತೆ ಒದಗಿಸಿದ್ದರು.
ಕಲ್ಯಾಟ್‍ನಲ್ಲಿ ಶರತ್‍ಲಾಲ್ ಮತ್ತು ಕೃಪೇಶ್ ಅವರ ಸ್ಮಾರಕದಿಂದ ಎಚಿಲುತುಕ್ಕುಗೆ ತೆರಳಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಘರ್ಷಣೆ ಸಂಭವಿಸಿದೆ. ಜೋಡಿ ಕೊಲೆ ಪ್ರಕರಣದಲ್ಲಿ ಇಮ್ಮಡಿ ಜೀವಾವಧಿ ಶಿಕ್ಷೆಗೆ ಗುರಿಯಾದವರಲ್ಲಿ, ನಾಲ್ಕನೇ ಆರೋಪಿ ಕೆ. ಅನಿಲ್‍ಕುಮಾರ್ ಮತ್ತು ಎಂಟನೇ ಆರೋಪಿ ಸುಬೀಷ್ ವೆಲÉ್ತೂೀಳಿಗೆ ಪೆರೋಲ್ ನೀಡಲಾಗಿದೆ. ಸುಬೀಷ್ ಗೆ 20 ದಿನಗಳು ಮತ್ತು ಅನಿಲ್ ಕುಮಾರ್‍ಗೆ ಒಂದು ತಿಂಗಳು ಪೆರೋಲ್ ನೀಡಲಾಗಿದೆ.




