ಕಾಸರಗೋಡು: ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ಕಾಶಿ ಕುಮಾರನ್ (ಪಿ.ವಿ. ಕುಮಾರನ್) ಅವರ ಸ್ಮರಣಾರ್ಥ ಉದುಮದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಉದುಮ ಕ್ಷೇತ್ರದ ಉಪಾಧ್ಯಕ್ಷ ತಂಬಾನ್ ಅಚೇರಿ ಅಧ್ಯಕ್ಷತೆ ವಹಿಸಿದ್ದರು.
ಆರ್‍ಎಸ್‍ಎಸ್‍ನ ಹಿರಿಯ ಪ್ರಚಾರಕ ಎ.ಸಿ.ಗೋಪಿನಾಥ್, ಮಾಜಿ ಶಾಸಕ ಕೆ.ವಿ. ಕುಞÂರಾಮನ್, ಹಿರಿಯ ಸಿಪಿಎಂ ಮುಖಂಡ ಭಾಸ್ಕರನ್, ಕಾಂಗ್ರೆಸ್ ಉದುಮ ಮಂಡಲ ಕಾರ್ಯದರ್ಶಿ ಪಂದಲ್ ನಾರಾಯಣನ್, ಸೇವಾ ಭಾರತಿ ಚೆಮ್ನಾಡು ಪಂಚಾಯಿತಿ ಸಮಿತಿ ಕಾರ್ಯದರ್ಶಿ ಗಂಗಾಧರನ್ ಆಚೇರಿ, ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಮಾಧ್ಯಮ ಸಂಚಾಲಕ ವೈ.ಕೃಷ್ಣದಾಸ್, ಮಂಡಲ ಸಮಿತಿ ಅಧ್ಯಕ್ಷೆ ಶೈನಿಮೋಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಕೂಟಕಣಿ,ಸಿಪಿಎಂ ಪ್ರಾದೇಶ ಸಮಿತಿ ಸದಸ್ಯ ಸಂತೋಷ್ ಕುಮಾರ್, ಪಂಚಾಯಿತಿ ಸಮಿತಿ ಅಧ್ಯಕ್ಷ ಮಧುಸೂತನನ್, ಕಾರ್ಯದರ್ಶಿ ವಿನಿಲ್ ಮುಲ್ಲಚೇರಿ, ವಿನಾಯಕ ಪ್ರಸಾದ್ ಉಪಸ್ಥಿತರಿದ್ದರು.





