ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಕಾಸರಗೋಡಿನಲ್ಲಿ ಜರುಗಿತು. ಕೇಂದ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಭಜನಾ ಕಮ್ಮಟ ಸಂಯೋಜಕರಾ ಸುಬ್ರಮಣ್ಯ ಪ್ರಸಾದ್ ಧರ್ಮಸ್ಥಳ ಅವರು ಭಜನಾ ಕಮ್ಮಟದ ಬಗ್ಗೆ ಮಾಹಿತಿ ನೀಡಿದರು. ಸಂತೋಷ್. ಪಿ. ಅಳಿಯೂರು ಸ್ವಾಗತಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಸುಳ್ಳುಪ್ರಚಾರ ಹಾಗೂ ಪೂಜ್ಯ ಕಾವಂದರ ಅವಹೇಳನವನ್ನು ಖಂಡಿಸಲಾಯಿತು. ಕ್ಷೇತ್ರದ ವಿರುದ್ಧ ಸಂಚು ನಡೆಸುತ್ತಿರುವ ದುಷ್ಟ ಶಕ್ತಿಗಳನು ನಿಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕಿನ ಭಜಕರಿಂದ ಭಜನಾ ಸಂಕೀರ್ತನೆ, ವಿಶೇಷ ಪೂಜೆ,ಪ್ರಾರ್ಥನೆ ನಡೆಸಲು ತೀರ್ಮಾನಿಸಲಾಯಿತು.
ಕಾಸರಗೋಡು ತಾಲೂಕು ಸಮಿತಿ ಗೌರವಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಅಧ್ಯಕ್ಷ ಡಾ. ಕೆ. ಎನ್. ವೆಂಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಆಚಾರ್ಯ ಮಧೂರು, ಶ್ರೀ ಗಗನ್ ಆಚಾರ್ಯ ಪುಲ್ಕೂರು ಉಪಸ್ಥಿತರಿದ್ದರು.





