ಪೆರ್ಲ: ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ನೂತನ ಶಾಖೆಯ ಆರಂಭ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಪೆರ್ಲದ ಸ್ನೇಹಾ ಕಾಂಪ್ಲೆಕ್ಸಿನಲ್ಲಿ ಜರುಗಿತು.
ವೇದಮೂರ್ತಿ ಕೂಟೇಲು ಕೇಶವ ಭಟ್ಟ ಅವರ ಪೌರೋಹಿತ್ಯದಲ್ಲಿ ಗಣಪತಿ ಹವನಾದಿ ಧಾರ್ಮೀಕ ಕಾರ್ಯಕ್ರಮ ನಡೆಯಿತು.
ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಶಿಬಿರ ಉದ್ಘಾಟಿಸಿದರು. ಪೆರ್ಲ ಸೇವಾ ಸಹಕಾರೀ ಬೇಂಕಿನ ಅಧ್ಯಕ್ಷೆ ಶ್ಯಾಮಲಾ ಆರ್. ಭಟ್ ಪತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಹವ್ಯಕ ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಎಣ್ಮಕಜೆ ವಲಯ ಅಧ್ಯಕ್ಷ ಕುಂಚಿನಡ್ಕ ಶಂಕರ ಪ್ರಸಾದ್, ಚಿಕಿತ್ಸಾಲಯದ ನೇತ್ರತಜ್ಞ ಡಾ| ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಚಿಕಿತ್ಸಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಎಡನಾಡು ಕೃಷ್ಣ ಮೋಹನ ಭಟ್ಟ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಮುಜುಂಗಾವು ಶಾಲಾ ಪ್ರಾಂಶುಪಾಲ ಶ್ಯಾಮ ಭಟ್ ದರ್ಭೆಮಾರ್ಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಭಟ್ಟ ವಂದಿಸಿದರು. ಡಾ. ನಿತ್ಯಾನಂದ ಶೆಟ್ಟಿ ಶಿಬಿರಾರ್ಥಿಗಳ ತಪಾಸಣೆ ನಡೆಸಿದರು.
ಉಚಿತ ನೇತ್ರ ತಪಾಸಣಾ ಶಿಬಿರವನ್ನು ಡಾ| ನಿತ್ಯಾನಂದ ಶೆಟ್ಟಿಯವರು ನಿರ್ವಹಿಸಿದರು. ಶಿಬಿರದ ಹಾಗೂ ಉದ್ಘಾಟನಾ ಸಮಾರಂಭದ ಹಿಂದಿನ ಹಾಗೂ ಮುಂದಿನ ನಿರ್ವಹಣೆ ಬಗ್ಗೆ ಚಿಕಿತ್ಸಾಲಯದ ನಿರ್ವಹಣಾಧಿಕಾರಿಗಳಾದ ಗಣೇಶ್ ಪ್ರಸಾದ್, ಮಚ್ಚೀಂದ್ರನಾಥ, ಚಿಕಿತ್ಸಾ ನಂತರದ ವೈದ್ಯಕೀಯ ಸಲಹೆಗಾರ, ಅನೀಶ ಮಾಹಿತಿ ನೀಡಿದರು. ನೇತ್ರ ತಪಾಸಣಾ ಶಿಬಿರದಲ್ಲಿ ಸುನೀತಾ ಯಸ್, ಮುಖ್ಯ ದಾದಿ ರಮಣಿ ಸಹಾಯಕರಾಗಿ ಸಹಕರಿಸಿದರು. ಒಟ್ಟು 74 ರೋಗಿಗಳ ನೇತ್ರ ತಪಾಸಣೆ ನಡೆಸಲಾಯಿತು.





