ಮಂಜೇಶ್ವರ: ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಹಾಗೂ ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್‍ನ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಕೋಳ್ಯೂರು ಆಡಿಟೋರಿಯಂನಲ್ಲಿ ಜರುಗಿತು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಅಧ್ಯಕ್ಷ ಸೋಮಪ್ಪ ಪಿ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಹಿಸಿದ್ದರು. ತುಳುನಾಡು ಮಾಣಿಕ್ಯ ಅರವಿಂದ ಬೋಳಾರ್ ವಿಶೇಷ ಅತಿಥಿಗಳಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ ಎಲ್ ಅಶ್ವಿನಿ, ಮಿಂಜಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್, ಮಿಂಜ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಚೇರ್ಮನ್ ಬಾಬು ಕೂಳೂರು, ಮಿಂಜಾ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ತುಂಗಾ ಎಂಬಿವರು ಉಪಸ್ಥಿತರಿದ್ದರು.
ಈ ಸಂದರ್ಭ ಕೋಳ್ಯೂರು ಪದವು ಅಂಗನವಾಡಿ ಸಹಾಯಕಿ ಲಲಿತಾ ಹಾಗೂ ಕೊಡ್ಲಮೊಗರು ಶ್ರೀ ವಾಣಿ ವಿಜಯ ಪ್ರೌಢಶಾಲೆಯ ನಿವೃತ್ತ ಮುಖಶಿಕ್ಷಕ ಸುಬ್ರಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್‍ನ ಲಾಂಛನ ಬಿಡುಗಡೆಗೊಳಿಸಲಾಯಿತು.
ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ನ ಸದಸ್ಯರು, ಊರವರು ಸೇರಿದಂತೆ ಹಲವು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಕೋಶಾಧಿಕಾರಿ ಮನೋಜ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಮನ್ಮಿತ್ ವಂದಿಸಿದರು.





