ಸಮರಸ ಚಿತ್ರಸುದ್ದಿ: ಕುಂಬಳೆ: ಕುಂಬಳೆಯ ಐಟೆಕ್ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯೆ ವಿದ್ಯಾಪೈ ಧ್ವಜರೋಹಣ ನಡೆಸಿದರು. ಮಹಮ್ಮಾಯ ಟ್ರೇಡರ್ಸ್ ಮಾಲಿಕ ಸಂದೇಶ ಭಟ್, ವೈದ್ಯರಾದ ಗಣೇಶ್, ಕುಂಬಳೆ ಮಾಸ್ಟರ್ ಬುಕ್ ಹೌಸಿನ ರಾಜೇಶ್ವರಿ, ವ್ಯಾಪಾರಿ ಗೋಕುಲ್‍ದಾಸ್, ಇನ್‍ಸ್ಟಿಟ್ಯೂಟ್ ಪ್ರಾಂಶುಪಾಲರಾದ ರವಿ ಮುಡಿಮಾರು ಮೊದಲಾದವರು ಉಪಸ್ಥಿತರಿದ್ದರು.


