ಕಾಸರಗೋಡು: ಜಿಲ್ಲೆಯ ವಿವಿಧೆಡೆ ಅತಿತೀವ್ರ ಸಮುದ್ರ ಕೊರೆತ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಾಪ್ಪಿಲ್, ಕೊಪ್ಪಲ್, ಕೊವ್ವಲ್, ಜನ್ಮ ಕಡಪ್ಪುರ ಸೇರಿದಂತೆ ಜಿಲ್ಲೆಯ ವಿವಿಧ ಕರಾವಳಿ ಪ್ರದೇಶಗಳ ಜನರ ಜೀವ ಮತ್ತು ಆಸ್ತಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಲಾಯಿತು.
ಶಾಸಕ ಸಿ.ಎಚ್.ಕುಂಜಂಬು ಧರಣಿ ಉದ್ಘಾಟಿಸಿದರು.ಅಶೋಕನ್ ಸಿಲೋನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ವಿ.ಕುಞÂರಾಮನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ.ಕೆ.ವಿಜಯನ್, ಬ್ಲಾಕ್ ಪಂಚಾಯತ್ ಸದಸ್ಯೆ ಪುಷ್ಪಾ ಶ್ರೀಧರನ್, ಪಂಚಾಯತ್ ಸದಸ್ಯರು
ಪಿ.ಕೆ.ಜಲೀಲ್, ಶಕುಂತಲಾ ಭಾಸ್ಕರನ್, ಚಂದ್ರನ್ ನಾಲಾಂವದುಕ್ಕಲ್, ರಾಜಕೀಯ ಪಕ್ಷದ ನಾಯಕರಾದ ಪಿ.ವಿ. ರಾಜೇಂದ್ರನ್, ಕೆ. ಶ್ರೀಧರನ್, ಕೆ. ಸಂತೋಷ್ ಕುಮಾರ್, ಕೆ. ವಿ. ಅಪ್ಪು, ಬಿ. ಬಾಲಕೃಷ್ಣನ್, ಕೆ. ವಿ. ಭಕ್ತವತ್ಸಲನ್ ಉಪಸ್ಥಿತರಿದ್ದರು. ರಮೇಶನ ಕೊಪ್ಪಳ್ ಸ್ವಾಗತಿಸಿದರು. ಭಾವನ ಕೊಪ್ಪಳ್ ವಂದಿಸಿದರು. ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಧರಣಿಯಲ್ಲಿಮಹಿಳೆಯರ ಸಹಿತ ನೂರಾರು ಮಂದಿ ಕರಾವಳಿ ಪ್ರದೇಶದ ಸಂತ್ರಸ್ತ ಜನರು ಭಾಗವಹಿಸಿದ್ದರು.




