ಕಾಸರಗೋಡು: ಕಾಞಂಗಾಡ್‍ನಿಂದ ಪೆರಿಯ ಮೂನಾಂಕಡವು, ಕುಂಡಂಗುಳಿ, ಬಂದಡ್ಕ, ಕನ್ನಡಿತೋಡು ಹಾದಿಯಾಗಿ ಸುಳ್ಯ ರೂಟಲ್ಲಿ ಹೊಸ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಸಿ.ಎಚ್ ಕುಞಂಬು ಮಾಹಿತಿ ನೀಡಿದ್ದಾರೆ.
ಮಲೆನಾಡು ಪ್ರದೇಶದ ಜನತೆಗೆ ಸುಳ್ಯದೊಂದಿಗೆ ಸುಲಭ ಸಂಪರ್ಕ ಕಲ್ಪಿಸಲು ಕೆಎಸ್‍ಆರ್‍ಟಿಸಿ ಕಾಞಂಗಾಡ್ ಡಿಪೆÇೀದಿಂದ ಹೊಸ ಬಸ್ ಸಂಚಾರ ಆರಂಭಿಸಲಿದೆ.
ಶಾಸಕ ಸಿ.ಎಚ್.ಕುಞಂಬು ಅವರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಪ್ರದೇಶದ ಜನತೆಯ ಪ್ರಯಾಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಹಾದಿಯಾಗಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಿಗೆ ಅವಕಾಶ ನೀಡುವಂತೆ ಮಾಡಿಕೊಂಡಿದ್ದ ಮನವಿಯನ್ವಯ ಹೊಸ ಬಸ್ ಸೇವೆಯನ್ನು ಆರಂಭಿಸಲು ತೀರ್ಮನ ಕೈಗೊಳ್ಳಲಾಗಿದೆ.
ಕಾಞಂಗಾಡ್‍ನಿಂದ ಬೆಳಿಗ್ಗೆ 6.40 ಕ್ಕೆ ಹೊರಟು 9.20 ಕ್ಕೆ ಸುಳ್ಯ ತಲುಪಲಿದೆ. 09.30ಕ್ಕೆ ಸುಳ್ಯದಿಂದ ಹೊರಟು, 11.45ಕ್ಕೆ ಕಾಞಂಗಾಡು ತಲುಪಲಿದೆ. ಕಾಞಂಗಾಡಿನಿಂದ ಮಧ್ಯಾಹ್ನ 12.10ಕ್ಕೆ ಹೊರಟು, 2.25 ಕ್ಕೆ ಸುಳ್ಯ, 02.35ಕ್ಕೆ ಸುಳ್ಯದಿಂದ ಹೊರಟು, 04.50ಕ್ಕೆ ಕಾಞಂಗಾಡ್ ತಲುಪಲಿದೆ. ಸಂಜೆ 5 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಸರಗೋಡು ಸಂಚರಿಸುವ ಬಸ್ ಸಂಜೆ 6.40ಕ್ಕೆ ಕಾಸರಗೋಡು ತಲುಪಿ ಅಲ್ಲಿಂದ ವಾಪಸಾಗಿ ರಾತ್ರಿ 8ಕ್ಕೆ ಕಾಞಂಗಾಡ್ ಡಿಪೆÇೀದಲ್ಲಿ ತಂಗುವ ರೀತಿಯಲ್ಲಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಬಸ್ ಸೇವೆ ಆರಂಭಗೊಂಡಲ್ಲಿ ಪೆರಿಯ, ಮೂನಾಂಕಡವ್, ಕುಂಡಂಗುಳಿ, ಕುತ್ತಿಕ್ಕೋಲ್, ಬಂದಡ್ಕ ಮುಂತಾದ ಪ್ರದೇಶಗಳ ಜನರಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದ್ದು, ಬಸ್ ಸಂಚಾರ ಶೀಘ್ರ ಆರಂಭಿಸುವಂತೆ ಸರ್ಕಾರಕ್ಕೆ ಮನವಿಮಾಡಿರುವುದಾಗಿ ಶಾಸಕ ಸಿ.ಎಚ್ ಕುಞಂಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.





