HEALTH TIPS

FASTag Annual Pass: ನಿನ್ನೆಯಿಂದ ಖರೀದಿಗೆ ಅವಕಾಶ, ಪಡೆಯೋದು ಹೇಗೆ? ವಾಹನ ಚಾಲಕರಿಗೆ ಹೇಗೆಲ್ಲಾ ಅನುಕೂಲ? ಇಲ್ಲಿದೆ ಮಾಹಿತಿ...

ನವದೆಹಲಿ: ಖಾಸಗಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಗೆ (FASTag Annual Pass) ನಿನ್ನೆ ಚಾಲನೆ ನೀಡಲಾಗಿದೆ. ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ಗಳಿಗಾಗಿ ಒಂದು ದಿನಕ್ಕೂ ಮುಂಚಿತವಾಗಿ ಪೂರ್ವ-ಬುಕಿಂಗ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ಇದು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID)ತಂತ್ರಜ್ಞಾನವನ್ನು ಬಳಸಿ, ವಾಹನಕ್ಕೆ ಲಿಂಕ್ ಮಾಡಲಾದ ಪ್ರಿಪೇಯ್ಡ್ ಖಾತೆಯಿಂದ ಸ್ವಯಂಚಾಲಿತವಾಗಿ ಟೋಲ್ ಶುಲ್ಕವನ್ನು ಕಡಿತಗೊಳಿಸುತ್ತದೆ. ವಾರ್ಷಿಕ ಪಾಸ್‌ಗಳು, ಅದರ ಖರೀದಿ, ಸೇವೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?

ಇದು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಅನ್ವಯವಾಗುವ ಪ್ರಿಪೇಯ್ಡ್ ಪಾಸ್ ಆಗಿದೆ. ಟೋಲ್ ಪಾವತಿಗಳಿಗಾಗಿ ಫಾಸ್ಟ್ ಟ್ಯಾಗ್ ಕಾರ್ಡ್‌ಗಳನ್ನು ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯ ಇರಲ್ಲ. ಆ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಪ್ರಯಾಣಕ್ಕೆ ಅವಕಾಶ ನೀಡುತ್ತದೆ.

ವಾರ್ಷಿಕ ಪಾಸ್ ನ್ನು ಎಲ್ಲಿ ಬಳಸಬಹುದು? ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE)ಟೋಲ್ ಫ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇ ರಾಜ್ಯ ಅಥವಾ ಖಾಸಗಿಯಾಗಿದ್ದರೆ, ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶಕ್ಕೆ ಅವಕಾಶ ದೊರೆಯಲ್ಲ.

ಪಾಸ್ ಅನ್ನು ಎಲ್ಲಿ ಖರೀದಿಸಬಹುದು?

ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಗಾಗಿ ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ (Rajmarg Yatra app)ಲಭ್ಯವಿದೆ. ಈ ಲಿಂಕ್ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿರುತ್ತದೆ.

ಪಾಸ್ ಅನ್ನು ಹೇಗೆ ಆಯಕ್ಟಿವೆಟೆಡ್ (activated) ಮಾಡಬಹುದು?

ಪಾಸ್ ನ್ನು Activate ಮಾಡಲು ನಿಮ್ಮ ವಾಹನ ಮತ್ತು ಫಾಸ್ಟ್‌ಟ್ಯಾಗ್ ಅನ್ನು ಪರಿಶೀಲಿಸಬೇಕಾಗುತ್ತದೆ. ತದನಂತರ ರೂ. 3,000 ಪಾವತಿಸಬೇಕಾಗುತ್ತದೆ. ಪೇಮೆಂಟ್ ಮಾಡಿದ ಎರಡು ಗಂಟೆಗಳಲ್ಲಿ ಅದು ಅಕ್ಟಿವೆಟೆಡ್ ( activated)ಆಗುತ್ತದೆ. ತದನಂತರ ಪಾಸ್ ಅನ್ನು ಒಂದು ವರ್ಷದವರೆಗೆ ಬಳಸಬಹುದು. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಲ್ಲಿ (SH) ಟೋಲ್ ಫ್ಲಾಜ್ ಗಳಲ್ಲಿ ಫಾಸ್ಟ್‌ಟ್ಯಾಗ್ ನಿಯಮಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರ ಶುಲ್ಕಗಳು ಅನ್ವಯಿಸಬಹುದು.

ಈಗಾಗಲೇ FASTag ಹೊಂದಿರುವವರು ಮತ್ತೆ ಹೊಸದಾಗಿ ಖರೀದಿಸಬೇಕಾ?

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಈಗಾಗಲೇ ತಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್‌ಟ್ಯಾಗ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಇರುವ ಪಾಸ್‌ನಲ್ಲಿಯೇ ಈ ಪಾಸ್ ಅನ್ನು ಆಕ್ಟಿವೆಟೆಡ್ (activated) ಮಾಡಿಕೊಳ್ಳಬಹುದು.ಆದಾಗ್ಯೂ ವಾರ್ಷಿಕ ಪಾಸ್ ಪಡೆಯಲು ಫಾಸ್ಟ್‌ಟ್ಯಾಗ್‌ನ KYC ಅತ್ಯಗತ್ಯವಾಗಿರುತ್ತದೆ.

#FASTagbasedAnnualPass for ₹3,000! ✅ Valid for 1 year or up to 200 toll plaza crossings – whichever is earlier – starting from the day you activate it. ✅ Enjoy seamless travel across highways without the hassle of frequent top-ups. Travel smarter, travel with #FASTag! Show more
137
Reply
Copy link


ವಾರ್ಷಿಕ ಪಾಸ್ ಬಳಸಿ ಎಷ್ಟು ಬಾರಿ ಪ್ರಯಾಣಿಸಹುದು: FASTag ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳಿಗೆ ಅನುಮತಿ ನೀಡುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳು ಪೂರ್ಣಗೊಂಡ ನಂತರ, ಇದು ಮೊದಲಿನಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ವಾರ್ಷಿಕ FASTag ಪಾಸ್‌ ಪಡೆಯಲು ಯಾರು ಅರ್ಹರಲ್ಲ?

ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಚಾಸಿಸ್ ಸಂಖ್ಯೆಯನ್ನು (chassis number) ಬಳಸಿಕೊಂಡು ನೋಂದಾಯಿಸಿದ್ದರೆ ನಿಮಗೆ ಪಾಸ್ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೆ, ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

ವಾರ್ಷಿಕ ಪಾಸ್ ಖರೀದಿಯಿಂದ ಆಗುವ ಪ್ರಯೋಜನಗಳೇನು? FASTag ವಾರ್ಷಿಕ ಪಾಸ್ ನಿಂದ ಟೋಲ್ ತೆರಿಗೆಯಲ್ಲಿ ರೂ. 5,000 ರಿಂದ 7,000 ರೂ.ವರೆಗೆ ಉಳಿಸಬಹುದು. ಇದಲ್ಲದೆ, ಪ್ರವಾಸದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾದರೂ ಚಿಂತಿಸಬೇಕಾದ ಅಗತ್ಯ ಇರಲ್ಲ.

ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ? ಇಲ್ಲ. ಹಾಗೆ ಮಾಡುವುದರಿಂದ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries