HEALTH TIPS

'ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ'.. ಸುಪ್ರೀಂ & ಹೈಕೋರ್ಟ್ ಕೊಲಿಜಿಯಂ ಬಗ್ಗೆ CJI ಅಭಿಮತ

ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಹೈಕೋರ್ಟ್‌ಗಿಂತ (High Court) ಉನ್ನತ ನ್ಯಾಯಾಲಯವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (Chief Justice of India B R Gavai) ಹೇಳಿದ್ದಾರೆ.

ಎರಡೂ ಸಮಾನ ಸಾಂವಿಧಾನಿಕ ಸಂಸ್ಥೆಗಳು:

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಹೈಕೋರ್ಟ್‌ ಎರಡೂ ಸಾಂವಿಧಾನಿಕ ಯೋಜನೆಯಡಿಯಲ್ಲಿ ಬರುವ ನ್ಯಾಯಾಲಯಗಳಾಗಿದ್ದು, ಸಮಾನ ಸಾಂವಿಧಾನಿಕ ಸಂಸ್ಥೆಗಳಾಗಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ಶಿಫಾರಸು ಮಾಡಲು ಇರುವ ಕೊಲಿಜಿಯಂ ವ್ಯವಸ್ಥೆಯ ಕುರಿತು ಮಾತನಾಡಿದ ಅವರು, ನ್ಯಾಯಾಧೀಶರನ್ನು ನೇಮಕ ಮಾಡುವ ವಿಚಾರದಲ್ಲಿ ಅದಕ್ಕೆ ಸಂಬಂಧಿಸಿದ ಹೈಕೋರ್ಟ್‌ಗೆ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಹೆಸರುಗಳನ್ನು ಶಿಫಾರಸು ಮಾಡುವಂತೆ ಹೈಕೋರ್ಟ್ ಕೊಲಿಜಿಯಂಗೆ ನಿರ್ದೇಶನ ಕೊಡಲು ಬರುವುದಿಲ್ಲ. ಇದರ ಬಗ್ಗೆ ಮೊದಲು ಹೈಕೋರ್ಟ್‌ ಕೊಲಿಜಿಯಂ ನಿರ್ಧಾರ ಮಾಡಬೇಕು. ನಾವು ಹೆಸರುಗಳನ್ನ ಮಾತ್ರ ಶಿಫಾರಸು ಮಾಡಲು ಸಾಧ್ಯ, ಅವರು ಸರಿಯಾಗಿ ಆಲೋಚನೆ ಮಾಡಿ, ಒಪ್ಪಿಗೆ ನೀಡಿದ ನಂತರವೇ ಆ ಹೆಸರುಗಳು ಸುಪ್ರೀಂ ಕೋರ್ಟ್‌ಗೆ ಬರುತ್ತದೆ ಎಂದು ಹೇಳಿದ್ದಾರೆ.

ಐತಿಹಾಸಿಕ ಹೋರಾಟಗಳ ಬಗ್ಗೆ ಉಲ್ಲೇಖ
ನವೆಂಬರ್ 24 ರಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರಕ್ಕೆ ಬರುವ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಪೂರ್ಣ ಪ್ರಮಾಣದ ಧ್ವಜಸ್ತಂಭ ಸಿದ್ದವಾಗಲಿದೆ ಎಂದು ಗವಾಯಿ ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರು 1855 ರ ಸಂತಲ್ ಹಲ್ ದಂಗೆ, 1857 ರ ದಂಗೆ, ರಾಣಿ ಲಕ್ಷ್ಮಿಬಾಯಿ, ಬಿರ್ಸಾ ಮುಂಡಾ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಮತ್ತು ಚಂಪಾರಣ್ ಸತ್ಯಾಗ್ರಹ ಸೇರಿದಂತೆ ಐತಿಹಾಸಿಕ ಹೋರಾಟಗಳ ಬಗ್ಗೆ ಸಹ ಅವರು ಉಲ್ಲೇಖ ಮಾಡಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ, ಸಮಾಜದಲ್ಲಿ ಜನರನ್ನ ಒಂದು ಮಾಡಿ ಸ್ವತಂತ್ರ ತಂದ ಅನೇಕ ಜನರ ತ್ಯಾಗವನ್ನ ಸಹ ಈ ಸಮಯದಲ್ಲಿ ಅವರು ಸ್ಮರಿಸಿದ್ದಾರೆ.

ತಮ್ಮ ಭಾಷಣದಲ್ಲಿ ಗವಾಯಿ ಅವರು 19ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಮತ್ತು ಸಮಾಜದಲ್ಲಿದ್ದ ಅಸಮತೋಲನಗಳನ್ನ ಪ್ರಶ್ನೆ ಮಾಡಿ, ಕೆಳತುದಿಯಲ್ಲಿದ್ದ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನ ಕೊಡಿಸಲು ಹೋರಾಡಿದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನ ಸಹ ನೆನಪಿಸಿಕೊಂಡು ಗೌರವ ನೀಡಿದ್ದಾರೆ.

ಇನ್ನು ನೀವು ಇತರರಿಗೆ ಸೇವೆ ಮಾಡುವುದರಿಂದ ನಿಮ್ಮನ್ನ ನೀವು ಕಂಡುಕೊಳ್ಳಲು ಸಹಾಯವಾಗುತ್ತದೆ ಎಂಬ ಮಹಾತ್ಮ ಗಾಂಧಿ ಅವರ ಮಾತನ್ನ ಉಲ್ಲೇಖ ಮಾಡಿದ ಅವರು, ಇದು ರಾಜಕೀಯ ಇರಬಹುದು ಅಥವಾ ಆಡಳಿತ ಹಾಗೂ ನಮ್ಮ ಜೀವನ, ಎಲ್ಲದಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ನ್ಯಾಯಯುತ, ಸಮಾನ ವ್ಯವಸ್ಥೆಯ ಭಾರತವನ್ನ ನಿರ್ಮಿಸುವುದು ಇನ್ನೂ ಬಾಕಿ ಇದೆ. ಅದನ್ನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದು, ಭಾರತದ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯುವುದು ವಕೀಲರು ಹಾಗೂ ನ್ಯಾಯಾಧೀಶರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries