SUNK: Ukrainian Recon Ship WIPED OUT By 🇷🇺 Unmanned Boats At The Mouth Of The Danube
The drone-like boats had been used during July Storm exercises. Ukrainian Armed Forces have acknowledged the loss of the Simferopol vessel.
📹: 🇷🇺 MoD pic.twitter.com/ZKdL2PCdLC
ಮೊನ್ನೆ ರಷ್ಯಾ ಉಕ್ರೇನ್ ಮೇಲೆ ಉಗ್ರ ದಾಳಿ ನಡೆಸಿದೆ ಎಂದು ತಿಳಿದಿದೆ. ರಾಜಧಾನಿ ಕೀವ್ ಮೇಲೆ ಸುಮಾರು 598 ಡ್ರೋನ್‌ಗಳು ಮತ್ತು 31 ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಜನರು ಗಾಯಗೊಂಡಿದ್ದಾರೆ.
ನಿನ್ನೆ ಕೂಡ ಮಾಸ್ಕೋ ಮೇಲೆ ಡ್ರೋನ್‌ಗಳಿಂದ ದಾಳಿ ಮಾಡಲಾಗಿದೆ. ಉಕ್ರೇನ್ ದೊಡ್ಡ ಗಸ್ತು ಹಡಗು ಸಿಮ್ಫೆರೊಪೋಲ್ ಡ್ಯಾನ್ಯೂಬ್ ನದಿಯಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿದೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಈ ಹಡಗು ಹೊಂದಿತ್ತು.
ಸಿಮ್ಫೆರೊಪೋಲ್ ಅನ್ನು 2019 ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎರಡು ವರ್ಷಗಳ ನಂತರ ಉಕ್ರೇನಿಯನ್ ನೌಕಾಪಡೆಗೆ ಸೇರ್ಪಡೆಯಾಗಿತ್ತು. 2014 ರ ಬಳಿಕ ಉಕ್ರೇನ್ ತಯಾರಿಸಿದ ದೊಡ್ಡ ಹಡಗು ಇದಾಗಿದೆ. ಕೆಲ ತಿಂಗಳಿನಿಂದ ರಷ್ಯಾ ಡ್ರೋನ್ ಉತ್ಪಾದನೆಗೆ ಹೆಚ್ಚಿಸುತ್ತಿದೆ. ಕಳೆದ ರಾತ್ರಿ ಕ್ಷಿಪಣಿ ದಾಳಿ ನಡೆಸಿ ಉಕ್ರೇನ್‌ನಲ್ಲಿದ್ದ ಡ್ರೋನ್ ಸೌಲಭ್ಯ ಘಟಕವನ್ನು ರಷ್ಯಾ ನಾಶ ಮಾಡಿದೆ.




