ಭಾರತ ತನ್ನ ಮಾತನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ ಒಂದೇ ವಾರದಲ್ಲಿ ಭಾರತದಿಂದ ಆಮದುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಶನಿವಾರ ವರದಿಯಲ್ಲಿ ತಿಳಿಸಿದೆ. ಅದಾದ ಬಳಿಕ ರಷ್ಯಾದಿಂದ ತೈಲ ಖರೀದಿಯ ಕಾರಣ ನೀಡಿದ ಭಾರತದ ಮೇಲೆ ಹೆಚ್ಚುವರಿ ಶೆ. 25ರಷ್ಟು ಸುಂಕ ವಿಧಿಸಿದ್ದರು. ಇದರೊಂದಿಗೆ ಭಾರತದ ಆಮದುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದಂತಾಗಿದೆ.
ಕದನವಿರಾಮದಲ್ಲಿ ಯಾವುದೇ ಮೂರನೇ ದೇಶದ ಪಾತ್ರವಿಲ್ಲ. ಪಾಕಿಸ್ತಾನದ ಡಿಜಿಎಂಓ ಭಾರತಕ್ಕೆ ಮನವಿ ಮಾಡಿದ್ದರಿಂದ ನಾವು ನೇರವಾಗಿ ಇತ್ಯರ್ಥಪಡಿಸಿಕೊಂಡಿದ್ದೇವೆ ಎಂದು ಜೂನ್‌ನಲ್ಲಿ ಪ್ರಧಾನಿ ಮೋದಿ, ಟ್ರಂಪ್‌ಗೆ ತಿಳಿಸಿದ್ದರು ಎಂದು ವರದಿ ಹೇಳಿದೆ.
ಆದರೆ, ಟ್ರಂಪ್ ಮಾತ್ರ ಹಲವು ಕಡೆಗಳಲ್ಲಿ ಎರಡೂ ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸಲು ನಾನು ವ್ಯಾಪಾರವನ್ನು ಒತ್ತಡದ ತಂತ್ರವಾಗಿ ಬಳಸಿದ್ದೆ ಎಂದು ಟ್ರಂಪ್ ಹೇಳಿದ್ದರು. ಆದರೆ, ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿತ್ತು.
ಸುಂಕ ಮಾತುಕತೆಗಳಿಂದ ನಿರಾಶೆಗೊಂಡ ಅಧ್ಯಕ್ಷ ಟ್ರಂಪ್ ಹಲವಾರು ಬಾರಿ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಚರ್ಚೆಗಳ ಬಗ್ಗೆ ಮಾಹಿತಿ ಹೊಂದಿರುವ ಇಬ್ಬರು ವ್ಯಕ್ತಿಗಳು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. ಆದರೆ, ಮೋದಿ ಮಾತ್ರ ಟ್ರಂಪ್ ಅವರ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ವರದಿ ಉಲ್ಲೇಖಿಸಿದೆ.
ವೈಟ್ ಹೌಸ್ ವಕ್ತಾರ ಅನ್ನಾ ಕೆಲ್ಲಿ ಅವರು ಅಧ್ಯಕ್ಷ ಟ್ರಂಪ್, ಮೋದಿ ಅವರನ್ನು ಸಂಪರ್ಕಿಸಿದ್ದಾರೆ ಎಂಬ ವರದಿ ನಿರಾಕರಿಸಿರ್ಧಧಾಋಏ. ಅಧ್ಯಕ್ಷ ಟ್ರಂಪ್ ಜುಲೈನಲ್ಲಿ ಭಾರತದ ಮೇಲೆ ಶೇ 25ರಷ್ಟು ಸುಂಕ ವಿಧಿಸಿದರು ಮತ್ತು ನಂತರ ಆಗಸ್ಟ್ 27ರಿಂದ ಜಾರಿಗೆ ಬಂದ ಶೇ 25ರಷ್ಟು ದ್ವಿತೀಯ ಸುಂಕವನ್ನು ವಿಧಿಸಿದರು.
ಜೂನ್‌ನಲ್ಲಿ ಟ್ರಂಪ್ ಕೆನಡಾದಲ್ಲಿ ನಡೆದ G7 ಶೃಂಗಸಭೆಯಿಂದ ಏರ್ ಫೋರ್ಸ್ ಒನ್‌ನಲ್ಲಿ ಹಿಂತಿರುಗುತ್ತಿದ್ದಾಗ 35 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದರು ಎಂದು NYT ವರದಿ ತಿಳಿಸಿದೆ.
ಯುಎಸ್ ನಿರ್ಧಾರವನ್ನು ಭಾರತ "ತೀವ್ರ ದುರದೃಷ್ಟಕರ" ಎಂದು ಕರೆದ ಭಾರತ
"ಇತ್ತೀಚಿನ ದಿನಗಳಲ್ಲಿ ಯುನೈಟೆಡ್ ಸ್ಟೇಟ್ಸ್ ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಗುರಿಯಾಗಿಸಿಕೊಂಡಿದೆ. ನಮ್ಮ ಆಮದುಗಳು ಮಾರುಕಟ್ಟೆ ಅಂಶಗಳನ್ನು ಆಧರಿಸಿವೆ ಮತ್ತು 1.4 ಶತಕೋಟಿ ಭಾರತೀಯರ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಒಟ್ಟಾರೆ ಉದ್ದೇಶದಿಂದ ಮಾಡಲಾಗಿದೆ ಎಂಬ ಅಂಶವನ್ನು ಒಳಗೊಂಡಂತೆ ಈ ವಿಷಯಗಳ ಕುರಿತು ನಮ್ಮ ಸ್ಥಾನವನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಹಲವಾರು ಇತರ ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳಿಗಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಲು ಯುಎಸ್ ಆಯ್ಕೆ ಮಾಡಿಕೊಂಡಿರುವುದು ತೀವ್ರ ದುರದೃಷ್ಟಕರ," ಎಂದು MEA ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ಕ್ರಮಗಳು ಅನ್ಯಾಯ, ಅನಗತ್ಯ ಮತ್ತು ಅವಿವೇಕದವು ಎಂದು ನಾವು ಪುನರುಚ್ಚರಿಸುತ್ತೇವೆ. ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ," ಎಂದು ಅದು ಹೇಳಿದೆ.
ಪ್ರಧಾನಿ ಮೋದಿ ಮತ್ತು ಯುಎಸ್ ಅಧ್ಯಕ್ಷರ ನಡುವಿನ ದೂರವಾಣಿ ಸಂಭಾಷಣೆಯ ಕುರಿತು ಜೂನ್ 18 ರಂದು ತಮ್ಮ ಹೇಳಿಕೆಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, "ಈ ಸಂಪೂರ್ಣ ಘಟನಾವಳಿಗಳ ಸಮಯದಲ್ಲಿ ಯಾವುದೇ ಹಂತದಲ್ಲಿ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಯುಎಸ್ ಮಧ್ಯಸ್ಥಿಕೆಗೆ ಯಾವುದೇ ಪ್ರಸ್ತಾಪವಿರಲಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ" ಎಂದು ಹೇಳಿದರು.
"ಸೇನಾ ಕ್ರಮವನ್ನು ನಿಲ್ಲಿಸುವ ಚರ್ಚೆ ಎರಡೂ ಸಶಸ್ತ್ರ ಪಡೆಗಳ ನಡುವಿನ ಅಸ್ತಿತ್ವದಲ್ಲಿರುವ ಸಂವಹನ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ನಡೆಯಿತು ಮತ್ತು ಇದನ್ನು ಪಾಕಿಸ್ತಾನದ ಕೋರಿಕೆಯ ಮೇರೆಗೆ ಪ್ರಾರಂಭಿಸಲಾಯಿತು. ಭಾರತ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್‌ಎಂದು ಪ್ರಧಾನಿ ಮೋದಿ ದೃಢವಾಗಿ ಹೇಳಿದರು. ಈ ವಿಷಯದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ," ಎಂದು ಅವರು ಹೇಳಿದರು
"ಅಧ್ಯಕ್ಷ ಟ್ರಂಪ್ ಪ್ರಧಾನ ಮಂತ್ರಿ ತಿಳಿಸಿದ ಅಂಶಗಳನ್ನು ಎಚ್ಚರಿಕೆಯಿಂದ ಆಲಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವೆಂದು ಪರಿಗಣಿಸುವುದಿಲ್ಲ, ಆದರೆ ಯುದ್ಧವೆಂದು ಪರಿಗಣಿಸುತ್ತದೆ ಮತ್ತು ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೆನಡಾದಿಂದ ಹಿಂತಿರುಗುವಾಗ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಬರಬಹುದೇ ಎಂದು ಟ್ರಂಪ್ ವಿಚಾರಿಸಿದ್ದರು. ಆದರೆ, ಪೂರ್ವ ಬದ್ಧತೆಗಳಿಂದಾಗಿ, ಪ್ರಧಾನಿ ಮೋದಿ ಹಾಗೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಇಬ್ಬರೂ ನಾಯಕರು ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡರು," ಎಂದು ಅದು ಹೇಳಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಚರ್ಚಿಸಿದರು ಎಂದು ಮಿಶ್ರಿ ಹೇಳಿದರು. ರಷ್ಯಾ - ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ, ಎರಡೂ ಪಕ್ಷಗಳ ನಡುವೆ ನೇರ ಸಂವಾದ ಅತ್ಯಗತ್ಯ ಮತ್ತು ಇದನ್ನು ಸುಗಮಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.




