ನವದೆಹಲಿ: ಚೀನಾದ ಜನಪ್ರಿಯ ವಿಡಿಯೊ ಆಯಪ್ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕೃತ ಮೂಲಗಳು ಶುಕ್ರವಾರ ತಡರಾತ್ರಿ ತಿಳಿಸಿವೆ.
ಕೆಲವರಿಗೆ ಟಿಕ್‌ಟಾಕ್ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಲು ಸಾಧ್ಯವಾಗಿದೆ ಎಂಬ ವರದಿಗಳು ಹರಿದಾಡಿದ್ದವು.
ಈ ಬಗ್ಗೆ ಪ್ರತಿಕ್ರಯಿಸಿದ ಸರ್ಕಾರ, ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು(uಟಿbಟoಛಿಞ) ಭಾರತ ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಅಂತಹ ಯಾವುದೇ ಹೇಳಿಕೆ ಅಥವಾ ಸುದ್ದಿ ಸುಳ್ಳು ಹಾಗೂ ದಾರಿತಪ್ಪಿಸುವಂತಿದೆ ಎಂದು ಹೇಳಿದೆ.
ಭಾರತದಲ್ಲಿ ಟಿಕ್‌ಟಾಕ್ ನಿಷೇಧವೇಕೆ?
2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಬಳಿಕ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತ ಸರ್ಕಾರ ಟಿಕ್‌ಟಾಕ್ ಆಯಪ್‌ನ್ನು ನಿಷೇಧಿಸಿತ್ತು. ಅಲ್ಲದೇ ಯುಸಿ ಬ್ರೌಸರ್, ಶೇನ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿತ್ತು.




