ಕುಂಬಳೆ: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ 23 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು 14 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀ ಕೃಷ್ಣ ವೇಷ ಸ್ಪರ್ಧೆ ಸೆ.14 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 8 ರಿಂದ ವಿಶ್ವಕರ್ಮ ಮಹಿಳಾ ಭಜನಾ ಮಂಡಳಿ ಕಾಸರಗೋಡು ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರ ನಾಗರಕಟ್ಟೆ ಇವರಿಂದ ಸಂಕೀರ್ತನೆ ನಡೆಯಲಿದೆ. 10 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಂತ್ರಿವರ್ಯ ಗಣೇಶ್ ಭಟ್ ಮುಂಡೋಡು ದೀಪ ಪ್ರಜ್ವಲನೆಗೈದು ಉದ್ಘಾಟಿಸುವರು. ಸುದರ್ಶನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಮಧ್ಯಾಹ್ನ 12.30 ಕ್ಕೆ ಅಷ್ಟಮಿ ಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ.ಬಿ.ನಾರಾಯಣ ನಾಯ್ಕ್ ಬಹುಮಾನ ವಿತರಿಸುವರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ಅಭ್ಯಾಗತರಾಗಿ ಭಾಗವಹಿಸುವರು.
ಕಂದಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ, ಶ್ರೀಕೃಷ್ಣ, ರಾಧೆ, ಯಶೋದ ಕೃಷ್ಣ, ರಾಧೆ ಮತ್ತು ಕೃಷ್ಣ, ಗೀತೋಪದೇಶ (ಕೃಷ್ಣ ಅರ್ಜುನ) ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಮೊಸರು ಕುಡಿಕೆ ಸ್ಪರ್ಧೆಯೂ ನಡೆಯಲಿದೆ.

