ಬದಿಯಡ್ಕ: ಬ್ರಹ್ಮೈಕ್ಯ ಶ್ರೀಕೇಶವಾನಂದ ಭಾರತೀ ಶ್ರೀಗಳ ಪಂಚಮ ವಾರ್ಷಿಕ ಆರಾಧನೆಯ ಅಂಗವಾಗಿ ಗುರುವಾರ ಸಂಜೆ ಶ್ರೀಎಡನೀರು ಮಠದಲ್ಲಿ ಉಡುಪಿ ಸಿದ್ಧಾಪುರದ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ನೇತೃತ್ವದಲ್ಲಿ ದಿ.ಕಾಳಿಂಗ ನಾವಡ ವಿರಚಿತ ಮಹೋನ್ನತ ಕಥಾನಕವಾದ ನಾಗಶ್ರೀ ಆಖ್ಯಾಯಿಕೆ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಮಧುಕರ ಹೆಗ್ಡೆ ಮಡಾಮಕ್ಕಿ, ಶಶಾಂಕ ಆಚಾರ್ಯ ಕಿರಿ ಮಂಜೇಶ್ವರ, ಪ್ರಜ್ವಲ್ ಮುಂಡಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ವಿಶ್ವನಾಥ ಆಚಾರ್ಯ ತೊಂದಟ್ಟು, ಕಡಬಾಳು ಉದಯ ಹೆಗ್ಡೆ, ಮಾಗೋಡು ಅಣ್ಣಪ್ಪ, ಕಾರ್ತಿಕ ಕಣ್ಣಿಮನೆ, ಕೆ.ಎಸ್.ಕಾರ್ತಿಕ, ಭಾಸ್ಕರ ಎಂ., ಸುಧೀರ್ ಉಪ್ಪೂರ್, ಸಂತೋಷ್ ಹೆಂಗವಳ್ಳಿ, ಪುರುಷೋತ್ತಮ ಸಾಗರ, ರವೀಂದ್ರ ದೇವಾಡಿಗ, ಪುರಂದರ ಮಾಡ್ಕಣಿ ಪಾತ್ರವರ್ಗ ನಿರ್ವಹಿಸಿದರು. ಬಳಿಕ ತೆಂಕು ತಿಟ್ಟಿನ ಕಲಾವಿದರಿಂದ ಅಗ್ರಪೂಜೆ ಯಕ್ಷಗಾನ ಪ್ರದರ್ಶನಗೊಂಡಿತು.




.jpg)
.jpg)
.jpg)
