ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಇವರ ವತಿಯಿಂದ 12ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸೆಪ್ಟಂಬರ್ 14 ಭಾನುವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ರಾಧಾ-ಕೃಷ್ಣರ ವೇಷದೊಂದಿಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಿಂದ ಶೋಭಾಯಾತ್ರೆ, 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಮಿತಿಯ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿರುವರು. ವಿಟ್ಲ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉದ್ಘಾಟಿಸುವರು. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 4.30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ವಕೀಲ ನರಸಿಂಹ ಶೆಣೈ ಅಧ್ಯಕ್ಷತೆ ವಹಿಸುವರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಚೆನ್ನೈ ಕಲ್ಪಾಕಂ ಅಣುಶಕ್ತಿ ವಿಭಾಗದ ನಿವೃತ್ತ ಇಂಜಿನಿಯರ್ ರಾಮಚಂದ್ರ ಬಿ. ಬಹುಮಾನ ವಿತರಿಸುವರು.
ಬೌದ್ಧಿಕ ಸ್ಪರ್ಧೆಗಳು :
3ನೇ ತರಗತಿಯಿಂದ 7ನೇ ತರಗತಿಯವರೆಗೆ, 8ನೇ ತರಗತಿಯಿಂದ 12 ತರಗತಿಯವರೆಗೆ ಎರಡು ವಿಭಾಗಗಳಲ್ಲಿ ಯೋಗಾಸನ ಸ್ಪರ್ಧೆ, 11ನೇ ಅಧ್ಯಾಯದ 01 ರಿಂದ 05ರ ವರೆಗಿನ 5 ಶ್ಲೋಕಗಳ ಭಗವದ್ಗೀತೆ ಕಂಠಪಾಠ, ಯಾವುದೇ ಭಾಷೆಯಲ್ಲಿರುವ 6 ನಿಮಿಷ ಅವಧಿಯ ದೇಶಭಕ್ತಿಗೀತೆ, ಭಜನೆ, ಮಧುರಾಷ್ಟಕ, ಸಾಂಸ್ಕøತಿಕ ರಸಪ್ರಶ್ನೆ.
ಶಾರೀರಿಕ ಸ್ಪರ್ಧೆಗಳು :
ಚೆಂಡುಹೆಕ್ಕುವ ಸ್ಪರ್ಧೆ, ಪೊಟೆಟೊ ರೇಸ್, ಪುಗ್ಗೆ ಒಡೆಯುವುದು, ಸಂಗೀತ ಕುರ್ಚಿ, ಮಡಿಕೆ ಒಡೆಯುವುದು ನಡೆಯಲಿವೆ.




