ಕಾಸರಗೋಡು: ಭಾರತೀಯ ಸಂಸ್ಕøತಿಯ ಪ್ರತಿಯೊಂದು ಆಚರಣೆಗಳ ಹಿಂದೆಯೂ ಜೀವನ ಮೌಲ್ಯಗಳು, ಬದುಕಿನ ಶ್ರೇಯಸ್ಸಿನ ಶಕ್ತಿ ಅಡಗಿದೆ. ಬಹು ವೈಶಿಷ್ಟ್ಯದ ನಮ್ಮ ಸಂಸ್ಕøತಿ ನಮ್ಮ ಪ್ರತಿಬಿಂಬಗಳಾಗಿದ್ದು, ಸಂಸ್ಕøತಿಯನ್ನು ತಿರುಚಿ ವಿಕೃತಗೊಳಿಸುವುದರಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು.
ಕಾಸರಗೋಡು ಕೋಣೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿಯು ಪೇಟೆ ಶ್ರೀವೆಂಕಟ್ರಮಣ ಸ್ವಾಮಿ ಕೃಪಾಪೋಶಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾಸರಗೋಡು ಪೇಟೆ ವೆಂಕಟ್ರಮಣ ದೇವಾಲಯದ ವ್ಯಾಸ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕಾಸರಗೋಡು ದಸರಾ-2025 ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿದರು.
ನವರಾತ್ರಿ ಆಚರಣೆಗಳನ್ನು ವಿಪುಲವಾಗಿ ಆಚರಿಸುವುದರಿಂದ ಯುವ ಸಮೂಹದಲ್ಲಿ ಹೊಸ ಚಿಂತನೆ ಮೂಡಿಬರುತ್ತದೆ. ಧಾರ್ಮಿಕವಾಗಿ ಸಂಸ್ಕøತಿಯೊಂದಿಗೆ ಹೆಜ್ಜೆ ಇರಿಸಲು ಕಾರಣವಾಗುತ್ತದೆ. ಮೌಲ್ಯಗಳನ್ನು ಉಳಿಸಿಕೊಂಡು ಆಚರಣೆಗಳನ್ನು ಮುನ್ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ. ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಸಮಾಜಮುಖಿ ವೈವಿಧ್ಯಮಯ ಕಾರ್ಯಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದವರು ಈ ಸಂದರ್ಭ ತಿಳಿಸಿದರು.
ಪೇಟೆ ಶ್ರೀವೆಂಕಟ್ರಮಣ ಸ್ವಾಮಿ ಕೃಪಾಪೋಶಿತ ಯಕ್ಷಗಾನ ಕಲಾಸಂಘದ ವ್ಯವಸ್ಥಾಪಕ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಭಿನ್ನತೆಗಳೊಂದಿಗೆ ವಿಶಾಲ ಚಿಂತನೆಗಳನ್ನು ಯುವ ಸಮೂಹಕ್ಕೆ ಕೈದಾಟಿಸುವುದು ಪ್ರಜ್ಞಾವಣತ ನಾಗರಿಕ ಪ್ರಪಂಚದ ಕರ್ತವ್ಯ. ಈ ನಿಟ್ಟಿನಲ್ಲಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವರ್ಷಂಪ್ರತಿ ಆಯೋಜಿಸುವ ದಸರಾ ನಾಡಹಬ್ಬ ಗಮನಾರ್ಹವಾದುದು. ಯಕ್ಷಗಾನ, ಪೌರಾಣಿಕ ನಾಟಕಗಳ ಮೂಲಕ ಹೊಸ ತಲೆಮಾರನ್ನು ಸಮರ್ಥವಾಗಿ ರೂಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಹಿರಿಯ ಲೇಖಕ ವೈ ಸತ್ಯನಾರಾಯಣ ಹಾಗೂ ನೇಪಥ್ಯ ಕಲಾವಿದ ಸುಧಾಕರ ಮಲ್ಲ ಅವರನ್ನು ಕಾಸರಗೋಡು ದಸರಾ ಗೌರವಾರ್ಪಣೆಗೈದು ಅಭಿನಂದಿಸಲಾಯಿತು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಂಚಾಲ ಶಿವರಾಮ ಕಾಸರಗೋಡು, ನಗರಸಭಾ ಸದಸ್ಯೆ ಶ್ರೀಲತಾ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಕಲಾ ಹೊಳ್ಳ ಸ್ವಾಗತಿಸಿ, ಕಿಶೋರ್ ಕೆ. ಎಸ್.ವಿ.ಟಿ. ವಂದಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸೌಮ್ಯಾ ಶ್ರೀಕಾಂತ್ ಮಧೂರು ಅವರ ಶಿಷ್ಯೆಯರಾದ ಅರ್ಚನಾ ಮಾಯಿಪ್ಪಾಡಿ, ಅಪರ್ಣಾ ವಿ.ಶೆಟ್ಟಿ, ಐಶ್ವರ್ಯ ರವಿರಾಜ್, ಸವಿನಿ ಎಸ್.ಸುಧೀರ್ ಅವರಿಂದ 'ಹೆಜ್ಜೆ-ಗೆಜ್ಜೆ' ನೃತ್ಯ ವೈವಿಧ್ಯ ಪ್ರಸ್ತುತಿಗೊಂಡಿತು., ದಿವಾಕರ ಕೆ.ಅಶೋಕನಗರ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕಾವ್ಯ ಕುಶಲ ನಿರ್ವಹಿಸಿದರು. ಶ್ರೀಕಾಂತ್ ಕಾಸರಗೋಡು ಸಹಕರಿಸಿದರು.




.jpg)
.jpg)
